ಕಲಬುರಗಿ, ಏ. 22: ಇಂದಿನಿoದ ಲಾಕ್‌ಡೌನ್ ಜಾರಿಗೆ ಬಂದಿದೆ, ಎಲ್ಲ ಬಾರ್, ವೈನ್ಸ್ ಶಾಪಗಳು ಮುಚ್ಚಲ್ಪಡುತ್ತವೆ ಎಂಬ ಭಯದಲ್ಲಿ ಮದ್ಯ ಪ್ರೀಯರು ಮದ್ಯದಂಗಡಿಗಳ ಮುಂದೆ ಮದ್ಯ ಖರೀದಿಯಲ್ಲಿ ತೊಡಗಿದ ದೃಶ್ಯ ಎಂಆರ್‌ಪಿ ಅಂಗಡಿಗಳ ಮುಂದೆ ಕಂಡುಬoದಿತು.
ಪೋಲಿಸರು ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಸುದ್ದಿ ತಿಳಿಯುತ್ತಲೇ ಎಲ್ಲಿಯೂ ಇದ್ದವರು ಎದ್ದು ಬಿದ್ದು, ಕೇಸ್‌ಗಟ್ಟಲೇ ಮದ್ಯ ಖರೀದಿಸಿ, ಖುಷಪಟ್ಟರು.
ಒಂದು ಎಂಆರ್‌ಪಿಗಳಲ್ಲAತೂ ಹಲವಾರು ಬ್ರಾö್ಯಂಡಗಳ ಮದ್ಯದ ಬಾಟಲಿಗಳು ಸಂಪೂರ್ಣ ಖಾಲಿಯಾಗಿದ್ದು, ಎಷ್ಟೋ ಜನ ತಮಗಿಷ್ಟದವಾದ ಮದ್ಯ ಸಿಗದೇ ವಾಪಸ್ಸು ಹೋದ ಘಟನೆಗಳು ಕೂಡ ನಡೆದಿವೆ.
ಸರಕಾರಿ ಕೇವಲ ಸಿಎಲ್ 4 ಹೊಂದಿದ್ದ ಪಬ್ ಮತ್ತು ಕ್ಲಬ್‌ಗಳನ್ನು ಮಾತ್ರ ಬಂದ್ ಮಾಡಿದ್ದು, ಉಳಿದಂತೆ ಬಾರ್ ಮತ್ತು ವೈನ್ ಶಾಪ್‌ಗಳು ಸರಕಾರದ ನಿಯಮದಂತೆ ಬೆಳಿಗ್ಗೆ 10 ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತವೆ.
ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ಮದ್ಯದಂಗಡಿಗಳು ಸಂಪೂರ್ಣವಾಗಿ ಬಂದ್ ಆಗಲಿವೆ.