ಕಲಬುರಗಿ, ಏ. 22: ಕೊರೊನಾ ಮಹಾಮಾರಿ ಕಟ್ಟಹಾಕಲು ಮತ್ತು ಅದರ ಚೈನ್ ಕಟ್ ಮಾಡಲು ಯೋಜಿಸಿ, ಯೋಚಿಸಿ ಸರಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂಗೆ ಕಲಬುರಗಿಯಲ್ಲಿ ಡೋಂಟ್ ಕೇರ್ ಆಗಿದೆ.
ನಗರದ ಹಲವೆಡೆ ರಾತ್ರಿ 2 ಗಂಟೆಯಾದರೂ ಹೋಟಲ್‌ಗಳು ತೆರೆದು ಚಹಾ ಮಾರುವ ದೃಶ್ಯ ಕಂಡುಬAದಿತು.
ನಗರದ ಸಂಗತ್ರಾಸವಾಡಿಯ ಪೆಟ್ರೋಲ್ ಬಂಕ್ ಹತ್ತಿರದ ಹಲವಾರು ಹೋಟೆಲಗಳು ಸಾತ್ ಗುಂಬಜ್ ಪ್ರದೇಶದ ಕೆಲವು ಹೊಟೆಲ್‌ಗಳು ಪಾನ್ ಬೀಡಾ ಅಂಗಡಿಗಳು ತೆರೆದ್ದು ಕಂಡುಬAದಿತ್ತು.
ನಗರದ ಸುಪರ್ ಮಾರ್ಕೆಟ್ ಪ್ರದೇಶದಿಂದ ಹಿಡಿದು, ಕಿರಾಣ ಬಜಾರ, ಕಪಡಾ ಬಜಾರ, ಫೋರ್ಟ್ ರಸ್ತೆ, ಮುಸ್ಲಿಂ ಚೌಕ್‌ಗಳಲ್ಲಿ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಮಾತ್ರ ಜಾರಿಗೆ ಬಂದಿದೆ.
ರಾತ್ರಿ ಇನ್ನು 9 ಗಂಟೆಗಿAತ ಮುಂಚೆಯೇ ಈ ಪ್ರದೇಶಗಳಲ್ಲಿ ಪೋಲಿಸರು ವಾಹನಗಳಿಗೆ ಅಳವಡಿಸಿದ ಸೈರನ್ ಹಾಕುತ್ತಲೇ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್ ಮಾಡುತ್ತಿದ್ದ ದೃಶ್ಯಗಳು ಕಂಡುಬAದವು.
ದರ್ಗಾ ಪ್ರದೇಶದಲ್ಲಿ ರಿಂಗ್ ರಸ್ತೆಯ ಒಳ ಬಡಾವಣೆಗಳಲ್ಲಿ ಕೂಡಾ ನೈಟ್ ಕರ್ಫ್ಯೂಗೆ ಜನ ಕ್ಯಾರೆ ಅನ್ನುತ್ತಿಲ್ಲ.