ಕಲಬುರಗಿ, ಏ. 21: ಮಹಾಮಾರಿ ಕೊರೊನಾ ಎರಡನೇ ಅಲೇ ಕಲಬುರಗಿ ಜಿಲ್ಲೆಯನ್ನು ಹಾಟ್‌ಸ್ಪಾಟ್ ಜಿಲ್ಲೆಯನ್ನಾಗಿ ಪರಿವರ್ತಿಸುತ್ತಿದೆ. ಇಲ್ಲಿ ದಿನೇ ದಿನೇ ಕೊರೊನಾ ಸೋಂಕುನ ಹೊಸ ಪ್ರಕರಣಗಳು ದಾಖಲಾಗುವುದಷ್ಟಲ್ಲೇ ಕರೊನಾಗೆ ದಿನದಿಂದ ದಿನಕ್ಕೆ ಸಾವುಗಳ ಪ್ರಕರಣ ಹೆಚ್ಚಾಗ ತೊಡಗಿದೆ.
ಬುಧುವಾರ ಜಿಲ್ಲೆಯಲ್ಲಿ ಹೊಸದಾಗಿ 757 ಜನರಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ನಿನ್ನೆ ಮಂಗಳವಾರ 7 ಜನರ ಬಲಿ ಈ ಸೋಂಕಿನಿAದ ಆಗಿದ್ದು, ಇದು ಕೂಡಾ ಹೆಚ್ಚಳವಾಗಿ ಇಂದು 8 ಜನರು ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಸಂಜೆ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಇಂದು 8 ಜನರು ಸೇರಿದಂತೆ ಈವರೆಗೆ 399 ಜನರು ಕೊರೊನಾ ಸೋಂಕಿನಿAದ ಸಾವನ್ನಪ್ಪಿದ್ದಾರೆ.
ಸೋಂಕಿನಿAದ ಆಸ್ಪತ್ರೆ ಸೇರಿದವರ ಗುಣಮುಖ ಅಂಕಿ ಅಂಶವು ಕೂಡಾ ತೀರ ಕಡಿಮೆಯಾಗುತ್ತಿದ್ದು, ಇಂದು 121 ಜನರು ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 25896 ಜನರು ಗುಣಮುಖರಾದಂತಾಗಿದೆ.
ಇಲ್ಲಿಯವರೆಗೆ 31636 ಜನರಿಗೆ ಪಾಸಿಟಿವ್ ಪ್ರಕರಣಗಳು ಬಂದ ಬಗ್ಗೆ ವರದಿಯಾಗಿದೆ.
ದಿನಾಂಕ 20ರವರೆಗೆ ಒಟ್ಟು 612535 ಜನರ ರಕ್ತ ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ576440 ಜನರಿಗೆ ನೆಗೆಟಿವ್ ವರದಿಬಂದಿದ್ದು, ಇನ್ನು 4459 ಜನರ ಕೋವಿಡ ಪರೀಕ್ಷೆಯ ವರದಿ ಬರಬೇಕಾಗಿದೆ.
ಒಟ್ಟು 803 ಜನರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಐಸೋಲೆಡ್ ಆಗಿದ್ದು, 27 ಜನರು ಕೋವಿಡ್ ಕೇರಸ್ ಸೆಂಟರ್‌ನಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ 17 ಕಂಟೋನ್ಮೆAಟ್ ಝೋನ್‌ಗಳನ್ನು ಗುರುತಿಸಲಾಗಿದೆ.