ಟೈಟ್ ನೈಟ್ ಕರ್ಫ್ಯೂ ಜಾರಿ

0
2547

ಕಲಬುರಗಿ, ಏ. 21: ನಗರದಲ್ಲಿ ಕೋವಿಡ್-19 ವೈರಸ್ ಹರಡದಂತೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿ ಕೋನದಿಂದ ನಗರದಾದ್ಯಂತ ದಿನಾಂಕ 21.4.2021ರ ರಾತ್ರಿ 9.00 ಗಂಟೆಯಿAದ ದಿನಾಂಕ 4.05.2021ರ ಬೆಳಗ್ಗೆ 6.00 ಗಂಟೆಯವರೆಗೆ ನೈಟ್ ಕರ್ಫ್ಯು ಹಾಗೂ ಶುಕ್ರವಾರ ರಾತ್ರಿ 9.00 ಗಂಟೆಯಿ0ದ ಸೋಮವಾರ ಬೆಳಗ್ಗೆ 6.00 ಗಂಟೆಯವರೆಗೆ ವಿಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸುವದು ಅವಶ್ಯಕವಾಗಿರುವುದರಿ0ದ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144 ರನ್ವಯ ನಿಷೇಧಾಜೆ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲ0 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗರ ಪೋಲಿಸ್ ಆಯುಕ್ತ ಹಾಗೂ ಹೆಚ್ಚುವರಿ ದಂಡಾಧಿಕಾರಿಯಾದ ಸತೀಶಕುಮಾರ ಅವರು ಆದೇಶ ಜಾರಿಮಾಡಿದ್ದಾರೆ.
ನೈಟ್ ಕರ್ಫ್ಯೂ ಮಾರ್ಗಸೂಚಿಗಳು :
ರಾತ್ರಿ 9.00 ಗಂಟೆಯಿAದ ಬೆಳಗ್ಗೆ 6.09 ಗಂಟೆಯವರೆಗೆ ವೈಯಕ್ತಿಕವಾಗಿ ಅತ್ಯವಶ್ಯಕ ಚಟುವಟಿಕೆಗಳಿಗೆ ಹೊರತುಪಡಿಸಿ ಸಂಚಾರ ಮಾಡುವುದನ್ನು ನಿಷೇಧಿಸಿದೆ. ರೋಗಿಗಳು ಹಾಗೂ ಅವರ ಸಹಾಯಕರಿಗೆ ತುರ್ತು ಸಂದರ್ಭದಲ್ಲಿ ಸಂಚರಿಸಲು ಅನುಮತಿಸಿದೆ.
ಎಲ್ಲಾ ಕೈಗಾರಿಕಾ ಕಂಪನಿಗಳಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಅನುಮತಿಸಿದೆ, ಕಂಪನಿಯಿAದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ನೌಕರರು, ಟೆಲಿಕಾಂ ಸಂಸ್ಥೆ ಸ್ಥೆಯ ವಾಹನಗಳು, ಇಂಟರ್ ನೇಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ. ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ, ಕೆಲಸ ನಿರ್ವಹಿಸುವ ಸಂಸ್ಥೆಯಿAದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು.
ಆರೋಗ್ಯ ಮತ್ತು ತುರ್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸತಕ್ಕದ್ದು. ಹಾಗೂ ಇತರೆ ಔದ್ಯಮಿಕ ಚಟುವಟಿಕೆಗಳು ನಿಷೇಧಿಸಿದೆ.
ಸರಕು ಸಾಗಾಣಿಕೆಗಳಿಂದÀ ತುಂಬಿರುವ ವಾಹನಗಳು, ಹೋಮ ಡಿಲೇವರಿ, ಮಾಡುವ ವಾಹನಗಳು, ಇ ಕಾಮರ್ಸ್ ಕಂಪನಿಯ ವಾಹನಗಳು ಸಂಚರಿಸಲು ಅನುಮತಿಸಿದೆ.
ರಾತ್ರಿಯಲ್ಲಿ ದೂರ ಪ್ರಯಾಣದ ಬಸ ಸೇವೆ, ರೈಲು ಹಾಗೂ ವಾಯು ಸಂಚಾರಕ್ಕೆ ಅನುಮತಿಸಿದೆ, ಪ್ರಯಾಣಿಕರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಅನುಮತಿಸಿದೆ, ಪ್ರವಾಸದ ಸಂದರ್ಭದಲ್ಲಿ ಪ್ರಯಾಣದ ಟಿಕೇಟ್ ಕಡ್ಡಾಯವಾಗಿ ಹೊಂದಿರುವುದು.
ವಿಕೆಂಡ್ ಕರ್ಫ್ಯೂ ಮಾರ್ಗಸೂಚಿಗಳು :
ಕೇಂದ್ರ ಮತ್ತು ರಾಜ್ಯ ಸರಕಾರಿ ವಲಯಗಳಲ್ಲಿ ಹಾಗೂ ಕೋವಿಡ್-19 ತುರ್ತು ಪರಿಸ್ಥಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿ/ಸAಸ್ಥೆ/ ತುರ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ 24 ಗ0ಟೆ ಕೆಲಸ ನಿರ್ವಹಿಸಲು ನೌಕರರಿಗೆ ಅನುಮತಿಸಿದೆ, ಕಂಪನಿಯಿAದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ 513 ಸ
ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್ ನೇಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಸರಾಗ. ಕೆಲಸ ನಿರ್ವಹಿಸುವ ಸಂಸ್ಥೆಯಿAದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ಹಾಗೂ ಅವರ ಸಹಾಯಕರಿಗೆ. ಸಂಬAಧಿಗಳಿಗೆ ತುರ್ತು ಸಂದರ್ಭದಲ್ಲಿ ಹಾಗೂ ವ್ಯಾಕ್ಸಿನೇಶನ್ ಪಡೆಯಲು ತೆರಳುವ ಸಾರ್ವಜನಿಕರಿಗೆ ಸಂಚರಿಸಲು ಗುರುತಿನ ಚೀಟಿಯೊಂದಿಗೆ ಅನುಮತಿಸಿದೆ.
ಬೆಳಗ್ಗೆ 6:00 ಗಂಟೆಯಿAದ ಬೆಳಗ್ಗೆ 10:00 ಗಂಟೆಯವರೆಗೆ ಸಾರ್ವಜನಿಕರಿಗೆ ಅವಶ್ಯಕವಾಗಿರುವ ನೆರೆಹೊರೆ ಅಂಗಡಿಗಳಲ್ಲಿ ದಿನಸಿ ಸಾಮಗಿ/ಹಣ್ಣು/ತರಕಾರಿ/ ಹಾಲು/ಮಾಂಸ ಹಾಗೂ ಮೀನು ಮಾರಾಟಕ್ಕೆ ಅನುಮತಿಸಿದೆ. ಅತ್ಯವಶ್ಯಕ ವಸ್ತುಗಳನ್ನು ಮನೆ ವಿತರಣೆ (ಹೋಮ ಡಿಲೆವರಿ) ಮಾಡಲು ಕೋವಿಡ್-19 ನಿಯಮಾವಳಿಯನ್ಹಯ ಅನುಮತಿಸಿದೆ.
ರೆಸ್ದಾರೆಂಟ್ ಮತ್ತು ಕ್ಯಾಟ್ರೀನ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆ ಹಾಗೂ ಮನೆ ವಿತರಣೆಗೆ (ಹೋಮ ಡಿಲೆವರಿ) ಅನುಮತಿಸಿದೆ.
ರಾತ್ರಿಯಲ್ಲಿ ದೂರ ಪ್ರಯಾಣದ ಬಸ ಸೇವೆ, ರೈಲು ಹಾಗೂ ವಾಯು ಸಂಚಾರಕ್ಕೆ ಅನುಮತಿಸಿದೆ, ಪ್ರಯಾಣಿಕರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಕೋವಿಡ್-19 ನಿಯಮಾವಳಿಯನ್ವಯ ಅನುಮತಿಸಿದೆ, ಪ್ರವಾಸದ ಸಂದರ್ಭದಲ್ಲಿ ಪ್ರ ಕಳಟೇಷ. ಟಿಕೇಟ್ ಕಡ್ಡಾಯವಾಗಿ ಹೊಂದಿರುವುದು.
ಮದುವೆ ಸಮಾರಂಭಗಳಿಗೆ 50 ಜನರಿಗೆ ಮೀರದಂತೆ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡುವುದು.
ಅಂತ್ಯ ಕ್ರಿಯೆ/ಶವ ಸಂಸ್ಕಾರಕ್ಕೆ 20 ಜನರಿಗೆ ಮೀರದಂತೆ ಕೋವಿಡ್-19 ಮಾರ್ಗಸೂಚಿಗಳನ್ವಯ ಷರತ್ತುಗೊಳಪಟ್ಟು ಅನುಮತಿ ನೀಡುವುದು.
ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್ ಮಾಲ್ಟ್, ಜಿಮ್ ಕೇಂದ್ರಗಳು, ಸ್ಪೋರ್ಟ್ಬ ಕಾಂಪ್ಲೆಕ್ಸ್, ಸ್ವಿಮಿಂಗ್ ಪೂಲ್ಸ್, ಮನೋರಂಜನೆ ಪಾರ್ಕಗಳು, ಥೇಟರ್, ಬಾರ್ ಮತ್ತು ಅಡ್ಕುಟೋರಿಯಮ್ಸ್, ಅಸೆಂಬ್ಲಿ ಹಾಲ್ ಗಳು ಮುಚ್ಚುವಂತೆ ಸೂಚಿಸಿದೆ.
ಎಲ್ಲಾ ಸಾಮಾಜಿಕ/ ರಾಜ್ಯಕೀಯ/ ಕ್ರೀಡೆ/ ಮನೋರಂಜನೆ /ಸಂಸ್ಕೃತಿಕ/ ಧಾರ್ಮಿಕ ಹಾಗೂ ಇತರೆ ಜನದಟ್ಟನೆಯಿಂದ ಕೂಡುವ ಕಾರ್ಯಕ್ರಮ ನಿಷೇಧಿಸಿದೆ.
ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪೂಜೆ ಮಾಡುವುದನ್ನು ನಿಷೇಧಿಸಿದೆ, ದಿನ ನಿತ್ಯÀ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ಸಾರ್ವಜನಿಕರು ಇಲ್ಲದೆ ಮುಂದುವರೆಸಲು ಅನುಮತಿಸಿದೆ. ಕಟ್ಟಡ ಚಟುವಟಕೆಗಳನ್ನು ನಿಷೇಧಿಸಿದೆ.
ಮೇಲೆ ತೋರಿಸಿದ ಎಲ್ಲಾ ಮಾರ್ಗ ಸೂಜಿಗಳು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ 4 ಜನಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಮತ್ತು ಸರ್ಕಾರದ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಟನ್ 51 ರಿಂದ 60 ರವರೆಗೆ ಹಾಗೂ ಕಲಂ 188 ಐ.ಪಿ.ಸಿ ಅಡಿಯಲ್ಲಿ ಕಾನೂನು ರಿತ್ಯ ಕ್ರಮಕೈಗೊಳ್ಳಲಾಗವುದು ಎಂದು ಸತೀಶಕುಮಾರ ಅವರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here