ಬೆAಗಳೂರು, ಏ. 20: ಪ್ರಧಾನಿ ನರೇಂದ್ರ ಮೋದಿಯವರ ಸಲಹೆ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ರಾಜ್ಯದಲ್ಲಿ ವಿಧಿಸಬಹುದಾಗಿದ್ದ ಲಾಕ್‌ಡೌನ್ ನ್ನು ಕೈ ಬಿಟ್ಟ ಸರಕಾರ ನಾಳೆಯಿಂದ 14 ದಿನಗಳವರೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.
ನಾಳೆ 21 ರಿಂದ ಮೇ 4ರ ವರೆಗೆ ರಾಜ್ಯದಲ್ಲಿ ಈಗಿದ್ದ ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 10 ರಿಂದ 9 ಗಂಟೆಗೆ ಬದಲಿಸಿ ಬೆಳಗಿನ 6.00 ಗಂಟೆಯವರೆಗೆ ಜಾರಿಗೆ ತಂದಿದೆ. ಅಲ್ಲದೇ ವಿಕೆಂಡ್ ಕರ್ಫ್ಯು ಬುಧುವಾರ ರಾತ್ರಿ 9.00 ರಿಂದ ಸೋಮವಾರ ಬೆಳಗಿನ 6.00 ಗಂಟೆಯವರೆಗೆ ಕಠಿಣವಾಗಿ ಜಾರಿಗೆ ತರಲು ತನ್ನ ನಿರ್ಧಾರ ಪ್ರಕಟಿಸಿದೆ.
ಇಂದು ಮಧ್ಯಾಹ್ನ ಸುಮಾರು ಎರಡು ವರೆಗಂಟೆಗಳ ಕಾಲ ನಡೆದ ರಾಜ್ಯ ಪಾಲರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯ ನಂತರ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಮುಖ್ಯಕಾರ್ಯದರ್ಶಿಗಳು, ಸಚಿವರ ಸಮಾ ಲೋಚನೆ ನಂತರ ಸರಕಾರ ಕೈಗೊಂಡ ನಿಯಮಗಳನ್ನು ರಾಜ್ಯದ ಮುಖ್ಯಕಾರ್ಯದ ರ್ಶಿ ರವಿಕುಮಾರ ಅವರು ಗುರುವಾರ ರಾತ್ರಿ 9.30ಕ್ಕೆ ಪ್ರಕಟಿಸಿದರು.
ನಾಳೆಯಿಂದ ಏನೇನು ಇರಲ್ಲ:
- ಪ್ರಾರ್ಥನಾ ಮಂದಿರ, ಚರ್ಚ, ಮಸೀದಿಗಳು ಸಂಪೂರ್ಣ ಬಂದ್
- ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸ್ಲ್‌ಗೆ ಮಾತ್ರ ಅವಕಾಶ
- ಶಾಲಾ, ಕಾಲೇಜುಗಳು ಸಂಪೂರ್ಣ ಬಂದ್
- ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ
ಸಂಖ್ಯೆ ಶೇ. 50ಕ್ಕೆ ಇಳಕೆ. - ಈಜುಕೋಳಗಳು, ಉದ್ಯಾನವನ, ಸಿನೆಮಾ ಹಾಲ್, ಮಲ್ಟಿಫೆಲಕ್ಸ್ ಸಂಪೂರ್ಣ ಬಂದ್.
- ಮಾಲ್‌ಗಳು, ಜಿಮ್ ಸಂಪೂರ್ಣ ಬಂದ್
- ಅಂತರಾರಾಜ್ಯ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಭಂಧ ಇಲ್ಲ.
- ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಇನ್ನು ಮುಂದೆ ಮನೆಯಿಂದಲೇ ಕೆಲಸ ನಿರ್ವಹಿಸಬೇಕು.
- ವೈನ್ ಸ್ಟೋರ್‌ಗಳಲ್ಲಿ ಪಾರ್ಸ್ಲ್‌ಗೆ ಮಾತ್ರ ಅವಕಾಶ
- ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೂ ಕೂಡಾ ಕೇವಲ ಪಾರ್ಸ್ಲ್‌ಗೆ ಅವಕಾಶ.