uಕಲಬುರಗಿ, ಏ. 20: ಶ್ರೀ ಶರಣಬಸವೇಶ್ವರ ಸಂಸ್ಥಾನದ ಲಿಂಗೈಕ್ಯ ಪರಮಪೂಜ್ಯ ದೊಡ್ಡಪ್ಪ ಅಪ್ಪ ಅವರ ದ್ವಿತೀಯ ಸುಪುತ್ರ ಬಸವರಾಜಪ್ಪ ಅಪ್ಪಾ ಅವರು ಇಂದು ಲಿಂಗೈಕ್ಯರಾದರೆAದು ತಿಳಿಸಲು ವಿಷಾಧವೇನಿಸುತ್ತದೆ.
ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಕಳೆದ 15 ದಿನಗಳಿಂದ ಅವರು ನಿಷ್ಠಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅಲ್ಲದೇ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.
ಬಸವರಾಜಪ್ಪ ಅಪ್ಪ ಅವರು ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಪೂಜ್ಯ ಶರಣಬಸಪ್ಪ ಅಪ್ಪ ಅವರ ಕಿರಿಯ ಸಹೋದರರಾಗಿದ್ದರು.