ನವದೆಹಲಿ, ಏ. 17: ಭಾರತ ಸರ್ಕಾರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಫಾರ್ಮಸಿಯುಟಿಕಲ್ಸ್ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಎಲ್ಲರಿಗೂ ‘ರೆಮ್ಡೆಸಿವಿರ್’ ಚುಚ್ಚುಮದ್ದಿನ ಕೈಗೆಟುಕುವಿಕೆಯಲ್ಲಿ ಸರ್ಕಾರದ ಮಧ್ಯಪ್ರವೇಶದಿಂದ ‘ರೆಮ್ಡೆಸಿವಿರ್ ಇಂಜೆಕ್ಷನ್’ ನ ಪ್ರಮುಖ ತಯಾರಕರು / ಮಾರಾಟಗಾರರು ಸ್ವಯಂ ಪ್ರೇರಿತವಾಗಿ ಈ ಕೆಳಗಿನಂತೆ ಮಾರಾಟ ಮಾಡಲು ದರವನ್ನು ಪರಿಷ್ಕರಿಸಿ ವರದಿ ಸಲ್ಲಿಸಿದ್ದಾರೆ.
ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಸ್ವಯಂಪ್ರೇರಿತ ರಿಡಕ್ಲಾನ್ (ಎಂಆರ್ಪಿ). ಪ್ರಮುಖ ಪರಿಷ್ಕೃತ ಬೆಲೆಗಳು
‘ರೆಮ್‌ಡೆಸಿವಿರ್ ಇಂಜೆಕ್ಷನ್ 100 ಎಂ.ಜಿ. ವಾಯಿಲ್‌ನÀ ಬ್ರಾಂಡ್‌ಗಳು ಇಂತಿವೆ. ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ ಕಂಪನಿಯ ಅಂತ್ಯAತ ಕಡಿಮೆ ಬೆಲೆಯ ರ‍್ಯಾಂಡೆಕನ್ನು 2,800 ಇದ್ದ ಬೆಲೆಯನ್ನು ಕಡಿಮೆ ಮಾಡಿ ಅದನ್ನು 899 ರೂ.ಗೆ ಮಾರುಕಟ್ಟೆಯಲ್ಲಿ ಎಂ.ಆರ್.ಪಿ. ದರ ನಿಗದಿಪಡಿಸಿದೆ.
ಸಿಂಗೆನ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಯೋಕಾನ್ ಬಯೋಲಾಜಿಕ್ಸ್ ಇಂಡಿಯಾ) “ರೆಮ್ವಿನ್” 3,950 / – ರಿಂದ 2,450ಕ್ಕೆ ಇಳಿಸಿದೆ. ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ರೆಡಿಎಕ್ಸ್ “5,400 ರಿದ್ದ ಬೆಲೆಯನ್ನು 2,700ಕ್ಕೆ ನಿಗದಿ ಪಡಿಸಿದೆ. ಇನ್ನು ಸಿಪ್ಲಾ ಲಿಮಿಟೆಡ್‌ನ ಸಿಪರೆಮ್ “4,000 / -” “3,000 / -“
ಮೈಲಾನ್ ಫಾರ್ಮಾ ಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಡೆಸ್ರೆಮ್ 4,800 ರಿಂದ 3,400ಕ್ಕೆ ಇಳಿಸಿದೆ. ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ ಜುಬಿ-ಆರ್ “4,700 ಇದ್ದ ದರವನ್ನು 3,400 ಮಾರುಕಟ್ಟೆಯಲ್ಲಿ ಎಂ.ಆರ್.ಪಿ. ದರಕ್ಕೆ ನಿಗದಿಪಡಿಸಿದೆ. ಹೆಟೆರೊ ಹೆಲ್ತ್ ಕೇರ್ ಲಿಮಿಟೆಡ್ ಕೋವಿಫಾರ್ 5,400 ರಿಂದ 3,490ಕ್ಕೆ ಇಳಿಸಿದೆ ಎಂದು ಕೇಂದ್ರ ಸರಕಾರದ ಔಷಧ ಬೆಲೆ ನಿಯಂತ್ರಣದ ಸದಸ್ಯ ಕಾರ್ಯದರ್ಶಿ ಡಾ. ವಿನೋದ ಕೊತ್ವಾಳ್ ಅವರು ತಿಳಿಸಿದ್ದಾರೆ.