ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ: ಸಾರಿಗೆ ನೌಕರರಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮನವಿ

    0
    804

    ಕಲಬುರಗಿ.ಏ.11:ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಅನಧಿಕೃತ ಮುಷ್ಕರವನ್ನು ಕೈಬಿಟ್ಟು ಕೆಲಸಕ್ಕೆ ವಾಪಸ್ ಬರಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಸಾರಿಗೆ ನೌಕರರಲ್ಲಿ ಮನವಿ ಮಾಡಿದ್ದಾರೆ.
    ರವಿವಾರ ಇಲ್ಲಿನ ಗ್ರಾಂಡ್ ಹೋಟೆಲ್‌ನಲ್ಲಿ ಕರೆಯಲಾದ ಜಂಟಿ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಕಾರ್ಮಿಕ ಆಯುಕ್ತರಲ್ಲಿ ಮುಷ್ಕರಕ್ಕೆ ಮಾನ್ಯತೆ ನೀಡುವಂತೆ ಕಾರ್ಮಿಕ ಸಂಘಟನೆ ಮನವಿ ಸಲ್ಲಿಸಿತು. ಈ ಕುರಿತು ಕಾರ್ಮಿಕ ಸಂಘಟನೆಯ ಬೈಲಾವನ್ನು ಪರಿಶೀಲಿಸಲಾಗಿ, ಇದು ಅನಧಿಕೃತ ಮುಷ್ಕರವಾಗಿದೆ ಎಂದು ಕಾರ್ಮಿಕ ಇಲಾಖೆಯು ಈಗಾಗಲೇ ವ್ಯಾಜ್ಯ ಇತ್ಯರ್ಥಪಡಸಿದೆ ಎಂದರು.
    ಸಾರಿಗೆ ನೌಕರರ 9 ಪ್ರಮುಖ ಬೇಡಿಕೆಯಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಸರ್ಕಾರ ಈಡೇರಿಸಿದೆ. ವೇತನ ಹೆಚ್ಚಳ ಕುರಿತಂತೆ ಚುನಾವಣೆ ನೀತಿ ಸಂಹಿತೆ ಅಡ್ಡ ಇರುವುದರಿಂದ ಪ್ರಸ್ತುತ ಅದು ಸಾಧ್ಯವಿಲ್ಲ. ಸಾರಿಗೆ ನೌಕರರು 6ನೇ ವೇತನ ಜಾರಿಗೆ ಮತ್ತು ಸರ್ಕಾರಿ ನೌಕರರನ್ನಾಗಿ ಪರಿಗಣನೆಗೆ ಪಟ್ಟು ಹಿಡಿದಿದ್ದು, ಇದು ಕಾರ್ಯಸಾಧುವಲ್ಲ ಎಂದು ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಸಾರಿಗೆ ನಿಗಮ ಹೊರತುಪಡಿಸಿ ರಾಜ್ಯದಲ್ಲಿ ಇದೇ ಮಾದರಿಯ ಬಹಳಷ್ಟು ನಿಗಮಗಳಿವೆ. ಎಲ್ಲರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವುದು ಅಸಾಧ್ಯ ಎಂದ ಶಿವರಾಮ ಹೆಬ್ಬಾರ್ ಅವರು ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ 3800 ಕೋಟಿ ರೂ. ನಷ್ಠವಿದೆ ಎಂದರು.

    ಸಿಮೆAಟ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ ಎಂಬ ದೂರುಗಳು ಬಂದಿದ್ದು, ಈ ಸಂಬAಧ ಈಗಾಗಲೇ ಅಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದೇನೆ. ಕಾರ್ಮಿಕ ಸಂಘಟನೆಗಳೊAದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ರೀತಿಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಕಾರ್ಮಿಕರ ಹಿತ ಕಾಯುವುದೇ ಇಲಾಖೆಯ ಪ್ರಥಮ ಆದ್ಯತೆಯಾಗಿದ್ದು, ಉದ್ದಿಮೆಯೂ ಬೆಳೆಯಬೇಕಿದೆ. ಒಟ್ಟಿನಲ್ಲಿ ಸಮತೋಲನದಿಂದ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
    ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಕಾರ್ಮಿಕ ಕ್ಷೇತ್ರಗಳಲ್ಲಿಯೇ 7 ಸುಧಾರಣೆಗಳನ್ನು ತರಲಾಗಿದೆ. ಇಡೀ ದೇಶದಲ್ಲಿ ಮಾದರಿಯಾಗಿ 24 ಗಂಟೆಗಳ ಕಾಲ ಮಹಿಳೆಯರು ಸಹ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಕೃಷಿ ಸಚಿವ ಬಿ.ಸಿ.ಪಾಟೀಲ, ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಅರ್. ನಿರಾಣಿ ಇದ್ದರು.

    LEAVE A REPLY

    Please enter your comment!
    Please enter your name here