ಕಲಬುರಗಿ.ಏ.06:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿಯೊಂದಿಗಿನ ರಾಸಲೀಲೆ ಸಿಡಿ ಪ್ರಕರಣದ ತನಿಖೆ ಇಡೀ ರಾಜ್ಯವಲ್ಲದೇ ದೇಶದಲ್ಲಿಯೇ ಬಿಸಿ ಬಿಸಿ ಚರ್ಚೆಯಾಗಿರುವ ಸಂದರ್ಭದಲ್ಲಿಯೇ ಗುಲಬರ್ಗಾ ವಿಶ್ವವಿ ದ್ಯಾಲಯದ ಗ್ರಂಥಾಲಯ ಅಧೀಕ್ಷಕನೊಬ್ಬ ಕೆಲಸ ಕೊಡಿಸು ವುದಾಗಿ ನಂಬಿಸಿ ಮಹಿಳೆಯೊಬ್ಬಳ ಅಶ್ಲೀಲ ವಿಡಿಯೋ ತರಿಸಿ ಕೊಂಡು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈಗ ಆತನಿಗೆ ಪೋಲಿಸರು ಬಂಧಿಸಿದ್ದಾರೆ.
ಬoಧಿತ ಆರೋಪಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಎಂದು ಗುರು ತಿಸಲಾಗಿದೆ.
ಮಹಿಳೆಗೆ ಬೆತ್ತಲಾಗಿ ವಿಡಿಯೋ ಮಾಡಿ ಹಾಕಿದರೆ ನಿನಗೆ ಖಾಯಂ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ. ಆತನ ಮಾತಿಗೆ ಮರುಳಾದ ಮಹಿಳೆಯು ತನ್ನದೇ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಆತನ ವಾಟ್ಸ್ ಆಪ್‌ಗೆ ಹಾಕಿದ್ದಾಳೆ.
ವಿಡಿಯೋ ನೋಡಿ ಸುಮ್ಮನಾಗುವ ಬದಲು ಅದನ್ನು ಬೇರೆ ಗ್ರೂಪ್‌ಗೆ ರವಾನಿಸಿದ್ದಾನೆ. ಆಗ ವಿಡಿಯೋ ವಿಶ್ವವಿದ್ಯಾಲಯದ ಎಲ್ಲ ಗ್ರುಪ್‌ನಲ್ಲಿಯೂ ಹರಿದಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಮಹಿಳೆಯು ತನಗೆ ನಂಬಿಸಿ ಮೋಸ ಮಾಡಿದ್ದಾನೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ.
ದೂರಿನಂತೆ ಪೋಲಿಸರು ಶರಣಪ್ಪ ಮಾಕುಂಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನಿಗೆ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.