ನಗರದಲ್ಲಿ ಮಟಮಟ ಬಿಸಿಲಿನಲ್ಲಿ ರೌಡಿಯೋರ್ವನ ಹತ್ಯೆ

1
8096

ಕಲಬುರಗಿ, ಮಾ. 28: ಹಳೆಯ ವೈಶ್ಯಮದ ಹಿನ್ನೆಲೆಯಲ್ಲಿ ರೌಡಿಯೋರ್ವನನ್ನು ಮಟಮಟ ಬಿಸಿನಲ್ಲಿಯೇ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿದ ಘಟನೆ ನಗರದ ಸರಕಾರಿ ಆಸ್ಪತ್ರೆಯ ಎದುರುಗಡೆ ಇಂದು ಸಂಜೆ 5 ಗಂಟೆಗೆ ಸುಮಾರಿಗೆ ನಡೆದ ಬಗ್ಗೆ ವರದಿಯಾಗಿದೆ.
ಮಾಂಗರವಾಡಿ ನಿವಾಸಿಯಾದ ವಿರಂತ್ ತಂದೆ ವಿಠಲ ಉಪಾಧ್ಯಾಯ (22) ವರ್ಷದ ಯುವಕನೇ ಹತ್ಯೆಗೀಡಾಗಿದ್ದಾನೆ.

ಘಟನೆಯ ವಿವರ : ಕಾರಿನಲ್ಲಿ ಬಂದು ಕಾರಿನಿಂದ ತೆಳಗೆ ಇಳಿದ ಸಮಯದಲ್ಲಿ ಯಾರೋ ಒಬ್ಬ ಯುವಕನೋರ್ವನು ಏನೋ ಮಾತನಾಡಿದಾಗ ಇಬ್ಬರ ಮಧ್ಯೆ ಜಗಳ ನಡೆದಾಗ ಅಲ್ಲಿಯೇ ಇದ್ದ ಹಲವಾರು ಯುವಕರು ಬಂದು ಮೃತಪಟ್ಟ ಯುವಕರ್ನೋವನೊಂದಿಗೆ ಜಗಳವಾಡುತ್ತಿದ್ದಾಗ ಮತ್ತೊಬ್ಬ ರೌಡಿಶೇಟರನೋರ್ವ ವಿರಂತ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಅಲ್ಲಿಂದ ಪರಾರಿಯಾದ ಬಗ್ಗೆ ವರದಿಯಾಗಿದೆ.
ಜಗಳವಾಡಿದ ಇಬ್ಬರು ಯುವಕರು ರೌಡಿ ಪಟ್ಟಿಯಲ್ಲಿದ್ದು, ಇದಕ್ಕೆ ಹಳೆಯ ವೈಶ್ಯಮವೇ ಕಾರಣವೆಂದು ಹೇಳಲಾಗಿದ್ದು, ಹತ್ಯೆ ಮಾಡಿದ ಯುವಕ ಪರಾರಿಯಾಗಿದ್ದು, ಪರಾರಿಯಾದ ತಂಡವನ್ನು ಪೋಲಿಸರು ಹುಡುಕುತ್ತಿದ್ದು, ಈ ವರೆಗೆ ಯಾರನ್ನು ಬಂಧಿಸಿಲ್ಲ ಎಂದು ಬ್ರಮ್ಮಪೂರ ಪಿಐ ಕಪೀಲದೇವ ಅವರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 COMMENT

  1. ನಿಮ್ಮ ಪತ್ರಿಕೆಯಲ್ಲಿ ಪ್ರಸಾರ ಮಾಡುವ ಸುದ್ದಿಗಳನ್ನು ಸತ್ಯಾ ಸತ್ಯವಾಗಿ ಮೂಡಿಬರುವ ಸುದ್ದಿಗಳಾಗಿದ್ದು ಅತೀ ಶೀಘ್ರದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ನಿಮ್ಮ ಪತ್ರಿಕೆ ಬಿಟ್ಟರೆ ಯಾವ ಪತ್ರಿಕೆನು ಇಲ್ಲವೆಂದು ತಿಳಿಸಲು ಇಚ್ಚಿಸುತ್ತೇನೆ

    ಅಭಿನಂದನೆಗಳು 🙏🙏🙏👍👍🇮🇳🙏

LEAVE A REPLY

Please enter your comment!
Please enter your name here