ಕಲಬುರಗಿ ಜಿಲ್ಲೆಯಲ್ಲಿ ಶನಿವಾರ 147 ಪ್ರಕರಣಗಳು ಇಬ್ಬರ ಸಾವು, ಮತ್ತೇ ಹೆಚ್ಚುತ್ತಿರುವ ಕೊರೊನಾ ಕಂಟಕ

0
1103

ಕಲಬುರಗಿ, ಮಾ. 27, ಕೊರೊನಾ ಎರಡನೇ ಅಲೇ ಮತ್ತೇ ಕಲಬುರಗಿಯಲ್ಲಿ ತಾಂಡವ ಪ್ರಾರಂಭ ಮಾಡಿದ್ದು ದಿನ ನಿತ್ಯ ಕೊರೊನಾ ಹೊಸ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 2 ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಅನುಗುಣವಾಗಿ ಏರಿಕೆ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಇಂದು ಹೊಸದಾಗಿ ಕಳೆದ 2 ತಿಂಗಳಲ್ಲೆ ಹೆಚ್ಚು ಅಂದರೆ 147 ಪ್ರಕರಣಗಳು ದಾಖಲಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇಂದು ಮತ್ತೆ ಇಬ್ಬರು ಬಲಿಯಾಗಿದ್ದಾರೆ.
ಇಂದು ಆಸ್ಪತ್ರೆಯಿಂದ 61 ಜನರು ಬಿಡುಗಡೆಯಾಗಿದ್ದು, 826 ಮಂದಿ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಇಬ್ಬರ ಸಾವು ಸೇರಿದಂತೆ ಕೊರೊನಾಗೆ ಬಲಿಯಾದವರ ಸಂಖ್ಯೆ 339 ಆಗಿದೆ.

LEAVE A REPLY

Please enter your comment!
Please enter your name here