ಹೋಳಿ ನಿಮಿತ್ಯ ಜಿಲ್ಲೆಯಾದ್ಯಂತ ಎರಡು ದಿನ ಮದ್ಯ ಮಾರಾಟ ನಿಷೇಧ

0
1213

ಕಲಬುರಗಿ, ಮಾ. 25: ಜಿಲ್ಲೆಯಾದ್ಯಂತ ದಿನಾಂಕ 28.3.2021 ಮತ್ತು 29.3.2021ರ ವರೆಗೆ ಎರಡು ದಿನಗಳ ಕಾಲ ಹೋಲಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ದಿನಾಂಕ 28.3.2021ರ ಬೆಳಿಗ್ಗೆ 6.00 ಗಂಟೆಯಿAದ 30.3.2021ರ ಬೆಳಿಗ್ಗೆ 6.00 ಗಂಟೆಯ ವರೆಗೆ ಎಲ್ಲ ತರಹದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ.
ಈ ಸಮಯದಲ್ಲಿ ಯಾವುದೇ ತರಹದ ಮದ್ಯದ ಅಂಗಡಿಗಳು ನಿಷೇಧಿಸಿ ಆದೇಶಿಸಿರುವ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಹೋಲಿ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಈ ಆದೇಶವನ್ನು ಜಾರಿ ಮಾಡಲಾಗಿದೆ

LEAVE A REPLY

Please enter your comment!
Please enter your name here