ಕಲಬುರಗಿ.ಮಾ.16:ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕಾಗಿ ಮಂಗಳವಾರ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡದ ವಾಣಿಜ್ಯ ಅಂಗಡಿಗಳನ್ನು ಪಾಲಿಕೆ ಮತ್ತು ಪೊಲೀಸರ ಜಂಟಿ ತಂಡ ಬಂದ್ ಮಾಡಿಸಿ ಬಿಸಿ ಮುಟ್ಟಿಸಿದೆ.
ನಗರ ಪೊಲೀಸ್ ಅಯುಕ್ತ ಎನ್. ಸತೀಷಕುಮಾರ ಮತ್ತು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರ ನಿರ್ದೇಶನದ ಮೇರೆಗೆ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಕಲಬುರಗಿ (ಬಿ) ಉಪ ವಿಭಾಗದ ಎ.ಸಿ.ಪಿ. ರಾಜೇಂದ್ರ ಮತ್ತು ಪಾಲಿಕೆ ಪರಿಸರ ಅಭಿಯಂತ ಮುನಾಫ ಪಟೇಲ ಅವರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸಾಮಾಜಿಕ ಅಂತರ ಪಾಲಿಸದ ಮತ್ತು ಮಾಸ್ಕ್ ಇಲ್ಲದೆ ಗ್ರಾಹಕರೊಂದಿಗೆ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳನ್ನು ಮುಚ್ಚಿಸಲಾಯಿತು.
ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿದ್ದು, ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್, ವಾಣಿಜ್ಯ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊAದಿಗೆ ವ್ಯವಹಾರ ನಡೆಸಬೇಕು ಎಂದು ಅಂಗಡಿ ಮಾಲೀಕರಿಗೆ ಇದೇ ಸಂದರ್ಭದಲ್ಲು ತಿಳಿಸಲಾಯಿತು.
ಜಂಟಿ ಕಾರ್ಯಾಚರಣೆಯಲ್ಲಿ ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು.