ರಾಜ್ಯದಲ್ಲಿ ಮತ್ತೇ ಅರ್ಭಟಿಸುತ್ತಿರುವ ಕೊರೊನಾ ಮಂಗಳವಾರ ಸಾವಿರ ಗಡಿದಾಡಿದ ಪ್ರಕರಣಗಳು

0
1067

ಬೆಂಗಳೂರು, ಮಾ.16- ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದು ಮೂರು ತಿಂಗಳ ನಂತರ ಹೊಸ ಪ್ರಕರಣಗಳು ಮತ್ತೆ ಸಾವಿರದ ಗಡಿದಾಟಿದೆ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಕೆಲದಿನಗಳಿಂದ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು ಕೊರೊನಾ ಎರಡನೆಯ ಅಲೆಯ ಭೀತಿಗೆ ಕಾರಣವಾಗಿದೆ ಸೋಂಕು ಪ್ರಕರಣಗಳು ಇದೇ ರೀತಿ ಏರಿಕೆ ಯಾಗುತ್ತ ಹೋದರೆ ಬೆಂಗಳೂರು ನಗರದಲ್ಲಿ ಮೊದಲಿಗೆ ಕೊರೊನಾ ಎರಡನೆಯ ಅಲೆ ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ
ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 6 ಸೋಂಕಿತ ರು ಮೃತಪಟ್ಟಿದ್ದು ಬೆಂಗಳೂರು ನಗರದಲ್ಲಿ 3 ಮಂದಿ ಧಾರವಾಡದಲ್ಲಿ ಮೈಸೂರು ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತು ಸಾವಿರ ಸನಿಹದಲ್ಲಿದೆ.
ಮಂಗಳವಾರ ರಾಜ್ಯದಲ್ಲಿ1135 ಜನರಿಗೆಸೊಂಕು ದೃಢ ಪಟ್ಟಿದೆ. 561ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 06 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 962339ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು940489 ಕೋವಿಡ್ ಸೊಂಕಿತರು ಚೇತರಿ ಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 9428ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿAದ ಈವರೆಗೆ 12403 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 129 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲು ಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 710 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 412699ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 3 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ4527ಕ್ಕೆ ಏರಿಕೆಯಾಗಿದೆ. ಇಂದು 329 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ401339 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು 6832 ಸಕ್ರಿಯ ಪ್ರಕರಣಗಳಿವೆ.
ಬಾಗಲಕೋಟೆ 06,ಬಳ್ಳಾರಿ 09 ಬೆಳಗಾವಿ12 ಬೆಂಗಳೂರು ಗ್ರಾಮಾಂತರ38, ಬೀದರ್32., ಚಾಮರಾಜನಗರ 00, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 02, ಚಿತ್ರದುರ್ಗ 11, ದಕ್ಷಿಣ ಕನ್ನಡ 50, ದಾವಣಗೆರೆ 07, ಧಾರವಾಡ 07, ಗದಗ 04, ಹಾಸನ 15, ಹಾವೇರಿ 00, ಕಲಬುರಗಿ 46, ಕೊಡಗು 02, ಕೋಲಾರ 06, ಕೊಪ್ಪಳ 02, ಮಂಡ್ಯ 06, ಮೈಸೂರು 58, ರಾಯಚೂರು 07, ರಾಮನಗರ 01, ಶಿವಮೊಗ್ಗ 05, ತುಮಕೂರು 32, ಉಡುಪಿ 32, ಉತ್ತರ ಕನ್ನಡ 05, ವಿಜಯಪುರ 13, ಯಾದಗಿರಿ 03.

LEAVE A REPLY

Please enter your comment!
Please enter your name here