ನಗರದಲ್ಲಿ ರಾತ್ರಿ ಇಡೀ ಹೋಟೆಲ್‌ಗಳ ವಹಿವಾಟು ಕಣ್ಣಿದ್ದರೂ ಕುರುಡರಂತಾಗಿರುವ ಪೋಲಿಸರು

0
1003

ಕಲಬುರಗಿ, ಮಾ. 16: ನಗರದಲ್ಲಿ ರಾತ್ರಿ 3.00 ಗಂಟೆಯಾದರೂ ನಿಮಗೆ ಚಹಾ, ನೂಡಲ್ಸ್, ಉಪಹಾರ ಬೇಕಾದರೆ ಸಿಗುವುದು ಖಚಿತ. ಇದು ನಗರದ ಮಧ್ಯ ಭಾಗ ದಲ್ಲಿರುವ ಸಂಗತ್ರಾಸವಾಡಿ ಹಾಗೂ ದರ್ಗಾ ಪ್ರದೇಶದಲ್ಲಿ.
ಬೇರೆ ಕಡೆ ರಾತ್ರಿ 11 ಗಂಟೆಯಾದರೆ ಪೋಲಿಸರು ಹೊಡೆದು ಅಂಗಡಿಗಳನ್ನು ಬಂದ್ ಮಾಡಿಸುತ್ತಾರೆ, ಆದರೆ ಇಲ್ಲಿ ಮಾತ್ರ ಯಾಕೆ ಇಲ್ಲ. ಇದು ಕಲಬುರಗಿ ನಗರದಲ್ಲಿ ಬರುವುದಿಲ್ಲವೇ. ಅಥವಾ ಬಂದರೂ ಕೂಡಾ ಪೋಲಿಸರು ಕಂಡರೂ ಕಂಡರಿಯದAತೆ ಕಾರ್ಯನಿರ್ವಹಿಸುವರೋ ಎಂಬುದು ತಿಳಿಯದಾಗಿದೆ.
ರಾತ್ರಿ 3 ಗಂಟೆಯಾದರೂ ಸಂಗತ್ರಾಸವಾಡಿಯ ಪೆಟ್ರೋಲ್ ಬಂಕ್ ಹತ್ತಿರ ಎರಡು ಮೂರು ಹೊಟೇಲ್‌ಗಳು ದಿನದಂತೆ ರಾತ್ರಿ ತೆರೆದು ಯಾರ ಭಯವಿಲ್ಲದಂತೆ ವಹಿವಾಟು ಮಾಡುತ್ತಿರುವುದು ಯಾರೂ ಬೇಕಾದರೂ ರಾತ್ರಿ ಬಂದು ಪರೀಕ್ಷಸಬಹುದು.
ಈಗಲಾದರೂ ಪೋಲಿಸರು ಎಚ್ಚೆತ್ತು ಕೋವಿಡದಂತಹ ಸೂಕ್ಷö್ಮ ಸಮಯದಲ್ಲಿ ಸೋಮಕು ಹರಡದಂತೆ ರಾತ್ರಿ ಹೊತ್ತು ಹೊಟೆಲ್‌ಗಳು ಬಂದ್ ಮಾಡಿಸುವಲ್ಲಿ ಶ್ರಮವಹಿಸುವರೋ ಎಂಬುದು ನಗರದ ಸಂಗತ್ರಾಸವಾಡಿ ಅಕ್ಕಪಕ್ಕದ ನಾಗರಿಕರ ಆಶಯವಾಗಿದೆ.

LEAVE A REPLY

Please enter your comment!
Please enter your name here