ಮಾಸ್ಕ ಇಲ್ಲದಿದ್ದರೆ ವಾಣಿಜ್ಯ ಪ್ರವೇಶ ನಿರಾಕರಣೆ ಅಂಗಡಿ ಮಾಲಿಕರುಗಳಿಗೆ ಆಯುಕ್ತರ ಖಡಕ್ ವಾರ್ನಿಂಗ್

0
1078

ಕಲಬುರಗಿ:ಮಾ.15: ಕಲಬುರಗಿ ಮ ಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಪಾಲಿಕೆ ವ್ಯಾಪ್ತಿಯ ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್, ವಾಣಿಜ್ಯ ಅಂಗಡಿ-ಮುAಗಟ್ಟು ಸ್ಥಳದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ ಪ್ರವೇಶ ನಿಷೇಧಿಸಿ ಎಂದು ಪಾಲಿಕೆ ಆ ಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ವಾಣಿಜ್ಯ ಅಂಗಡಿಗಳ ಮಾಲೀ ಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಒಂದು ವೇಳೆ ಮಾಸ್ಕ್ ಇಲ್ಲದೆ ಸಾರ್ವ ಜನಿಕ ಸ್ಥಳದಲ್ಲಿ ಪ್ರವೇಶ ನೀಡಿದಲ್ಲಿ ಅಂತಹ ವಾಣಿಜ್ಯ ಅಂಗಡಿಗಳ ಮಾಲೀ ಕರಿಗೆ ದಂಡ ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆ ಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಎರಡನೇ ಅಲೆ ನಿಯಂತ್ರಣ ಮತ್ತು ನೈರ್ಮಲೀಕರಣಕ್ಕೆ ಪಾಲಿಕೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here