‘ಮಹಾ ಶಿವರಾತ್ರಿ ನಿಮಿತ್ಯ ಶಿವನ ದರ್ಶನ ಪಡೆಯಲು ಭಕ್ತಾದಿಗಳ ದಂಡೆ ರಾಮತೀರ್ಥಕ್ಕೆ

0
966

ಕಲಬುರಗಿ, ಮಾ. 11: ಗುರುವಾರ ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಹೊರವಲಯದಲ್ಲಿರುವ ಆಳಂದ ಚೆಕ್‌ಪೋಸ್ಟ ಹತ್ತಿರದ ಶ್ರೀ ರಾಮತೀರ್ಥ ಮಂದಿರದಲ್ಲಿ ಭಕ್ತಿ, ಶ್ರದ್ಧೆಯಿಂದ ಬೆಳಿಗ್ಗೆಯಿಂದಲೇ ಶಿವನ ದರ್ಶನ ಪಡೆಯಲು ಶಿವನ ಭಕ್ತಾದಿಗಳ ದಂಡೆ ರಾಮತ್ರೀರ್ಥಕ್ಕೆ ಬರುತ್ತಿದೆ.

ಕಳೆದ 30 ವರ್ಷಗಳಿಂದ ಶ್ರೀ ರಾಮ ತೀರ್ಥ ಮಂದಿರದಲ್ಲಿ ಪ್ರತಿವರ್ಷ ಮಹಾಶಿವರಾತ್ರಿ ನಿಮಿತ್ಯವಾಗಿ ಪರಮಾತ್ಮನ ದರ್ಶನಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ದರ್ಶನ ಪಡೆಯುತ್ತಿದ್ದು, ಇಲ್ಲಿ ವಿಶೇಷವೆಂದರೆ ಶ್ರೀರಾಮನ ತೀರ್ಥವಾಗಿ ಶಿವನ ಲಿಂಗ ಪ್ರತಿಷ್ಠಾಪಿಸಲಾಗಿದ್ದು, ಇದು ಭಕ್ತರನ್ನು ಆಕರ್ಷಿಸುವ ಭಕ್ತಿ ಕೇಂದ್ರವಾಗಿದೆ.
ಎಲ್ಲ ಭಕ್ತಾದಿಗಳು ಮುಖಕ್ಕೆ ಮಾಸ್ಕ್ ಧರಿಸಿಯೇ ದರ್ಶನ ಪಡೆಯಲು ಸರತಿಯಲ್ಲಿ ನಿಂತಿರುವುದು ಸರ್ವೇ ಸಾಮಾನ್ಯವಾಗಿತ್ತು.

LEAVE A REPLY

Please enter your comment!
Please enter your name here