ಕಲಬುರಗಿ ರಂಗಾಯಣದಿoದ ಶಿವರಾತ್ರಿ ರಂಗೋತ್ಸವ:ಜ್ಯೋಷಿ

0
1130

ಕಲಬುರಗಿ, ಮಾ. 10:ಮಹಾಶಿವರಾತ್ರಿ ನಿಮಿತ್ಯವಾಗಿ ಕಲಬುರಗಿ ರಂಗಾಯಣ ಹಾಗೂ ಸಮುದಾಯ ಕಲಬುರಗಿ ಸಹಯೋಗದಲ್ಲಿ ನಾಳೆ 11.3.2021ರಿಂದ 15.03.2021ರ ವರೆಗೆ ಐದು ದಿನಗಳ ಕಾಲ ಶಿವರಾತ್ರಿ ರಂಗೋತ್ಸವ ಕಾರ್ಯಕ್ರಮವನ್ನು ಆಯೋಜಸಲಾಗಿದೆ ಎಂದು ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಷಿ ಅವರು ತಿಳಿಸಿದ್ದಾರೆ.
ಅವರು ಬುಧುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪ್ರತಿದಿನ ಸಂಜೆ 6.30 ಗಂಟೆಗೆ ನಗರದ ಎಸ್.ಎಂ. ಪಂಡಿತ ರಂಗಮAದಿರದಲ್ಲಿ ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾದೆ ಎಂದರು.
ಮಾರ್ಚ 11ರಂದು ಗುಲಬರ್ಗಾ ವಿವಿಯ ಕುಲಪತಿಗಳಾದ ಪ್ರೋ. ದಯಾನಂದ ಅಗಸರ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
11ರಂದು ಝಕಾರಿ ನದಾಫ್ ನಿರ್ದೇಶನದ ಸುಳ್ಳು ಸಂಸಾರದ ಆಟ ಎಂಬ ನಾಟಕವನ್ನು ರಂಗ ಆರಾಧಕ ಸಾಂಸ್ಕೃತಿಕ ಸಂಘಟನೆ ಸವದತ್ತಿ ಅವರಿಂದ ಅಭಿನಯಿಸಿಲ್ಪಡಲಿದೆ ಎಂದರು.
12.3.21ರ ನಾಟಕದ ಉದ್ಘಾಟನೆಯನ್ನು ಹೈ.ಕ.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಸವ ಕೇಂದ್ರದ ಸೋಮಣ್ಣ ನಡಕಟ್ಟಿ ಹಾಗೂ ಹಿರಿಯ ಸಾಹಿತಿ ಡಾ. ಕಾಶಿನಾಥ ಅಂಬಲಗಿ ಅವರುಗಳು ಆಗಮಿಸಲಿದ್ದಾರೆ.
13.3.2021ರ ನಾಟಕದ ಉದ್ಘಾಟನೆಯನ್ನು ಹೈ.ಕ. ಆಡಳಿತ ಮಂಡಳಿಯ ಸದಸ್ಯರೂ ಹಾಗೂ ಖ್ಯಾತ ವೈದ್ಯರಾದ ಡಾ. ಶರಣಬಸಪ್ಪ ಬಿ. ಕಾಮರೆಡ್ಡಿ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದು, ಪದವಿಪೂರ್ವ ಶಿಕ್ಷಣ ಸಂಸ್ಥೆಯ ಉಪನಿರ್ದೇಶಕರಾದÀ ಶಿವಶರಣಪ್ಪ ಮೂಳೆಗಾಂವ ಅವರು ಆಗಮಿಸಲಿದ್ದಾರೆ.
14ರ ನಾಟಕದ ಉದ್ಘಾಟನೆಯನ್ನು ಕಲಬುರಗಿ ಸಮುದಾಯ ಅಧ್ಯಕ್ಷರಾದ ಡಾ. ಪ್ರಭು ಖಾನಾಪೂರ ನೆರವೇರಿಸಲಿದ್ದು, ಉದ್ಯಮಿಗಳಾದ ಸಂತೋಷ ಬಿಲಗುಂದಿ ಮುಖ್ಯ ಅತಿಥಿಗಳಾಗಿ ಹಾಗೂ ದಿನಾಂಕ 15ರ ನಾಟಕದ ಉದ್ಘಾಟನೆಯನ್ನು ಕಸಾಪ ಮಾಜಿ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ಅವರು ನೆರವೇರಿಲಿರುವ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ದೇವಯ್ಯ ಗುತ್ತೇದಾರ ಹಾಗೂ ಗ್ರಾಮೀಣ ಠಾಣೆಯ ಪಿಐ ಶಂಕರಗೌಡ ಪಾಟೀಲ ಅವರುಗಳು ಆಗಮಿಸಲಿದ್ದು, ಈ ಐದು ದಿನಗಳ ನಾಟಕದ ಉದ್ಘಾಟನಾ ಸಮಾರಂಭಗಳ ಅಧ್ಯಕ್ಷತೆಯನ್ನು ಕಲಬುರಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಷಿ ಅವರು ವಹಿಸಲಿದ್ದಾರೆ.
ಮಾರ್ಚ 12ರಂದು ಮಾಲತೇಶ ಬಡಿಗೇರ ನಿರ್ದೇಶನದ ಡೋಹರ ಕಕ್ಕಯ್ಯ ನಾಟಕ ಹಾಗೂ ದಿನಾಂಕ 13.03.2021ರಂದು ವೈ.ಡಿ. ಬದಾಮಿ ನಿರ್ದೇಶನದ ಜೀವ ಇದ್ದರೆ ಜೀವನ ಎಂಬ ನಾಟಕ ಎರಡು ನಾಟಕಗಳನ್ನು ಸಾಣೆಹಳ್ಳಿ ಶಿವ ಸಂಚಾರ ತಂಡದಿAದ ಅಭಿನಯಿಸಲ್ಪಡುತ್ತಿದ್ದು, ದಿನಾಂಕ 14.03.21ರಂದು ಮಹಾದೇವ ಹಡಪದ ನಿರ್ದೇಶನದ ಸಿರಿಪುರಂದರ ನಾಟಕವನ್ನು ರಂಗಾಯಣ ಕಲಬುರಗಿ ತಂಡದಿAದ ಅಲ್ಲದೇ 15.3.21ರ ನಾಟಕವನ್ನು ಇದೇ ತಂಡವು ವಿಶ್ವನಾಥ ಪಾಟೀಲ ನಿರ್ದೇಶನದ ತ್ರಯಸ್ಕ ನಾಟಕವು ಕೂಡಾ ಅಭಿನಯಿಸಲಾಗುತ್ತದೆ. ಉಚಿತ ಪ್ರವೇಶವಿದ್ದು, ಎಲ್ಲರೂ ನಾಟಕ ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ, ಸಮುದಾಯ ಕಲಬುರಗಿಯ ಅಧ್ಯಕ್ಷ ಡಾ. ಪ್ರಭು ಖಾನಾಪೂರೆ ಮತ್ತು ಡಾ. ಶ್ರೀಶೈಲ್ ಘೂಳಿ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here