ಕಲಬುರಗಿ, ಮಾ. 10:ದೇಶದಲ್ಲಿ ಅದರಲ್ಲೂ ನೆರೆಯ ರಾಜ್ಯಗಳಲ್ಲಿ ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೊಂದಿಕೊAಡಿರುವ ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ., ಖಜೂರಿ, ನಿಂಬಾಳ ಹಾಗೂ ಅಫಜಲಪೂರ ತಾಲೂಕಿನ ಬಳ್ಳೂರಗಿ, ಮಾಶಾಳ ನಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಕೋವಿಡ-19 ನೆಗೆಟಿವ್ (72) ಗಂಟೆ ವರದಿ ಹೊಂದರೆ ಇರುವಂತಹ ವ್ಯಕ್ತಿಗಳನ್ನು ಜಿಲ್ಲೆಯೊಳಗೆ ಪ್ರವೇಶ ನೀಷೇಧಿಸಿ ಜಿಲ್ಲಾಧಿಕಾರಿ ವಿವಿ ಜೋತ್ಸಾö್ನ ಅವರು ಅದೇಶ ಹೊರಡಿಸಿದ್ದಾರೆ.
ನಿನ್ನೆ ನಡೆದ ಕೋವಿಡ್ -19 ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿ, ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಹರಡುವುದನ್ನು ತಡೆಗಟ್ಟುವ ಸಂಬAಧ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ನಡೆಯುವ ಜಾತ್ರೆ ಹಾಗೂ ಉರ್ಸಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ನಡೆಯುವ ಶ್ರೀ ಶರಣಬಸವೇಶ್ವರ ಜಾತ್ರೆಗೆ ಕೂಡ ಈ ಬಾರಿ ಕೋವಿಡ್ ಕರಿನೆರಳು ಬಿದ್ದು, ಜಾತ್ರೆ ಸರಳವಾಗಿ ನಡೆಯುವ ಸಾಧ್ಯತೆಯಿದೆ.