ಪತ್ರಕರ್ತರ ಸಂಘದಿoದ ರವಿವಾರ ಸನ್ಮಾನ- ಬೀಳ್ಕೊಡುಗೆ ಸಮಾರಂಭ

0
979

ಕಲಬುರಗಿ, ಮಾ. 06: ಇಂದು ರವಿವಾರ (7ರಂದು) ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂz ಪತ್ರಿಕಾ ಭವನದಲ್ಲಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕಳೆದ 17 ವರ್ಷಗಳ ಕಾಲ ಕಲಬುರಗಿಯಲ್ಲಿ ಈಟಿವಿ ವಾಹಿನಿಯ ವರದಿಗಾರರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾಗಿರುವ ಡಾ. ಶಿವರಾಮ ಅಸುಂಡಿ ಅವರಿಗೆ ಬೀಳ್ಕೊಡುಗೆ ಹಾಗೂ ರಂಗಾಯಣದ ನಿರ್ದೇಶಕರಾಗಿರುವ ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಅವರಿಗೆ ಮತ್ತು ರಾಜ್ಯ ಎಸ್ಸಿ, ಎಸ್ಟಿ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬುದ್ಧಲೋಕ ಪತ್ರಿಕೆಯ ಸಂಪಾದಕರಾದ ದೇವಿಂದ್ರಪ್ಪ ಕಪನೂರ ಅವರುಗಳಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಿರಿಯ ಪತ್ರಕರ್ತರು ಹಾಗೂ ಶರಣಬಸವ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಟಿ.ವಿ. ಶಿವಾನಂದನ್ ಹಾಗೂ ವಿಜಯವಾಣಿಯ ಸ್ಥಾನಿಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ವಹಿಸುವರು ಪಾಲ್ಗೊಳ್ಳಲಿದ್ದು, ಮಾಧ್ಯಮ ಮಿತ್ರರು ಕಾರ್ಯಕ್ರಮಕ್ಕೆ ಆಗಮಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here