ಕ್ರಿಕೆಟ್ ಪಂದ್ಯವಾಳಿ: ಪ್ರೆಸ್ ತಂಡದ ವಿರುದ್ಧ ಜಯಗಳಿಸಿದ ಪೋಲಿಸ್ ಎಲೆವನ್ ತಂಡ

0
1084

ಕಲಬುರಗಿ, ಮಾ. 4: ಪಿಎಸ್‌ಐ ಮಂಜುನಾಥ ರೆಡ್ಡಿ ಅವರ ಬಿರುಸಿನ 32 ರನ್‌ಗಳು ಹಾಗೂ ಸಿಪಿಐ ಅಯ್ಯಪ್ಪ ಅವರ ಮಾರಕ ಬೌಲಿಂಗ್‌ನಿoದಾಗಿ ಪೋಲಿಸ್ ಎಲೆವನ್ ತಂಡುವು ಪ್ರೆಸ್ ಎಲೆವನ್ ತಂಡದ ವಿರುದ್ಧ 21 ರನ್‌ಗಳಿಂದ ಜಯಗಳಿಸಿತು.
ಕಲಬುರಗಿ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಸೌಹಾರ್ದಯುತವಾದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಟಾಸ್ ಗೆದ್ದು ಬ್ಯಾಟ್ ಮಾಡಿದ ಪೋಲಿಸ್ ತಂಡ ನಿಗದಿತ 12 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 101 ರನ್‌ಗಳಿಸಿತು.
ಪೋಲಿಸ್ ತಂಡದ ನಾಯಕ ಆರಂಭಿಕ ಆಟಗಾರ ಎಡಿಷನಲ್ ಎಸ್ಪಿ ಪ್ರಸನ್ನ ದೇಸಾಯಿ 7 ರನ್, ಶಂಕರಗೌಡ 13 ರನ್, ಸಂತೋಷ 4ರನ್, ಮಂಜುನಾಥ ಸಿಪಿಐ ಅವರು 12 ರನ್, ಮಂಜುನಾಥ ಪಿಎಸ್‌ಐ 32, ಹುಸೇನ್ ಬಾಷಾ 9 ರನ್, ಅಯ್ಯಪ್ಪ 13 ರನ್, ಹನುಮಂತ 11ರನ್ ಗಳಿಸಿ ಒಟ್ಟು 101 ರನ್ ಮಾಡಿದರು.
ಪ್ರೆಸ್ ಎಲೆವನ್ ತಂಡದಿAದ ಅತ್ಯಂತ ಕರಾರುವಾಕ್ಯ ಬೌಲಿಂಗ್ ಮಾಡಿದ್ದು, ಅವರು 3 ಓವರ್‌ಗಳಲ್ಲಿ 20 ರನ್ ಕೊಟ್ಟು 3 ವಿಕೆಟ್ ಕಬಳಿಸಿದರು. ಇನ್ನು ಚಂದ್ರಕಾAತ ಅವರು ದುಬಾರಿ ರನ್ ನೀಡುವದರೊಂದಿಗೆ 2 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದರು. ರಾಧಾಕೃಷ್ಣ ಅªರುÀ 3 ಓವರ್‌ಗಳಲ್ಲಿ 26 ರನ್‌ಗೆ 1 ವಿಕೆಟ್ ಪಡೆದರೆ, ಸ್ಪಿನ್ ಬೌಲರ್ ಅರುಣ ಕದಮ್ 3 ಓವರ್‌ಗಳಲ್ಲಿ 29 ರನ್ ನೀಡಿ ಒಂದು ವಿಕೆಟ್ ಪಡೆದರು.
ಪೋಲಿಸ್ ಎಲೆವನ್ ತಂಡ ಅಷ್ಟೇನು ದೊಡ್ಡ ಟಾರ್ಗೆಟ್ ಅಲ್ಲದ 101 ರನ್‌ಗಳ ಬೆನ್ನಟ್ಟಿದ್ದ ಪ್ರೆಸ್ ಎಲೆವನ್ ತಂಡವು ಆರಂಭದಲ್ಲಿಯೇ ಕ್ಯಾಪನ್ ಪ್ರವೀಣ 0, ಚಂದ್ರಕಾAತ 10 ರನ್, ಶಂಕರ ಅವರ 13 ರನ್, ಅರುಣ ಗಡ್ಡದ 01 ರನ್ ಮಾಡಿ ಔಟಾದರು. ಆಗ ತಂಡದ ಮೊತ್ತ ಕೇವಲ 32 ಆಗಿತ್ತು ನಂತರ ಬಂದ ಯಾವ ಬ್ಯಾಟ್ಸ್ಮನ್‌ಗಳು ಹೆಚ್ಚು ಹೊತ್ತು ಕ್ರಿಜ್ ಮೇಲೆ ನಿಲ್ಲದೇ ಪೆವಿಲಿಯನ್ ಪರೇಡ ನಡೆಸಿದರು, ಅರುಣ ಕದಮ್ 12, ರಾಧಾಕೃಷ್ಣ 12, ರಾಘವೇಂದ್ರ 4, ಪುರುಷೋತ್ತಮ 4, ಮನೀಷ ದೇಶಮುಖ 7 ರನ್ ಮಾಡಿದರು. ಹೆಚ್ಚುವರಿಯಾಗಿ 11 ರನ್ ವಾಯಿಡ ರೂಪದಲ್ಲಿ ರನ್‌ಗಳು ಬಂದವು.
ಅAತಿಮವಾಗಿ ಪ್ರೆಸ್ ಎಲೆವನ್ ತಂಡವು ನಿಗದಿತ 12 ಓವರ್‌ಗಳಲ್ಲಿ 7 ವಿಕೆಟ್ ಕಳಿದುಕೊಂಡು 79 ರನ್‌ಗಳಿಸುವುದರೊಂದಿಗೆ 21 ರನ್‌ಗಳಿಂದ ಸೋಲನ್ನಿಪ್ಪಿತ್ತು.
ಮಂಜುನಾಥ ರೆಡ್ಡಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಪಂದ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಿ ಮಾರಿಯಮ್ ಜಾರ್ಜ್ ಅವರು ಬ್ಯಾಟ್ ಆಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಹಲವಾರು ಅಧಿಕಾರಿಗಳು ಸೇರಿದಂತೆ ಮಾಧ್ಯಮದ ಕೆಯುಡಬ್ಲೂö್ಯಜೆ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ವಿಜಯವಾಣಿಯ ಬ್ಯೂರೋ ಚೀಫ್ ವಾದಿರಾಜ ವ್ಯಾಸಮುದ್ರ, ಕನ್ನಡ ಪ್ರಭದ ಶೇಷಮೂರ್ತಿ ಅವಧಾನಿ, ಉದಯವಾಣಿ ಬ್ಯೂರೋಚೀಫ್ ಹಣಮಂತರಾವ ಭೈರಾಮಡಗಿ, ಟಿವಿ 9 ವರದಿಗಾರ ಸಂಜೀವ ಚಿಕ್ಕಮಠ, ವಿಜಯಕುಮಾರ ವಾರದ, ದೇವೇಂದ್ರಪ್ಪ ಕಪನೂರ, ಮನೀಷ ಪತ್ರಿಕೆಯ ರಾಜು ದೇಶಮುಖ, ಗೋಪಾಲರಾವ ಕುಲಕರ್ಣಿ, ಗಿರೀಶ ಕುಲಕರ್ಣಿ, ಜಯತೀರ್ಥ ಪಾಟೀಲ್, ರಂಗಪ್ಪ ಸೇರಿದಂತೆ ಇನ್ನು ಹಲವಾರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here