ಕಲಬುರಗಿ, ಮಾ. 01: ಎರಡು ಬಿಳಿ ಬಣ್ಣದ ಜೋಡೆತ್ತುಗಳನ್ನು ಕಳ್ಳತನ ಮಾಡಿ ಮಹಾರಾಷ್ಟçದ ಅಕ್ಕಲಕೋಟ ದನದ ಬಜಾ ರಕ್ಕೆ ಸಾಗಿಸುತ್ತಿರುವಾಗ ಪೋಲಿಸರು ದಾಳಿ ಮಾಡಿ ಎರಡು ಎತ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸುವಲ್ಲಿ ನರೋಣ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳ್ಳತನವಾದ ಎತ್ತುಗಳನ್ನು ಹೊತ್ತುಕೊ ಂಡು ಬೋಧನ ಗ್ರಾಮದ ಚಿಂಚನಸೂರ ಕ್ರಾಸ್ ಹತ್ತಿರ ದಾಳಿ ಮಾಡಿ ಪೋಲಿಸರು ಆರೋಪಿತರಾದ ಶಿವಕುಮಾರ ಅಲಿಯಾಸ ಪಾರ್ಲೆಜಿ ತಂದೆ ದೇವಿದಾಸ ಗೌಂಡಿ, ಸಾಲ ಕಲ್ಲಹಂಗರಗಾ, ರಾಜುತಂದೆ ಮುಕುಂದ ಹರಳಯ್ಯಾ, ಮತ್ತು ಅನೀಲ ತಂದೆ ಕೇಸುರಾವ ಅವರುಗಳನ್ನು ದಸ್ತಗೀರ ಮಾಡಿ ನ್ಯಾಯಾಲಯದ ಮುಂದೆ ಹಾಜರಪಡಿ ಸಿದ್ದಾರೆ.
ಕಲ್ಲಹಂಗರಾ ಗ್ರಾಮದ ಹಣಮಂತರಾವ ತಂದೆ ಶರಣಪ್ಪ ಬಿರಾದಾರ ಅವರಿಗೆ ಕಳು ಮಾಡಲಾದ ಎತ್ತುಗಳು ಸೇರಿದ್ದು, ಇವರು ನೀಡಿದ ದೂರಿನ ಮೇರೆಗೆ ಪೋಲಿಸರು ಯಶಸ್ವಿ ಕಾರ್ಯಾಚರಣೆ ನಡೆಸ ಆರೋಪಿ ಗಳನ್ನು ವಶಕ್ಕೆ ಪಡೆದಿದ್ದಾರೆ.
ನರೋಣಾ ಠಾಣೆಯ ಪಿಎಸ್‌ಐ ಉದಂಡಪ್ಪ ಮಣ್ಣೂರಕರ, ಭಾಗಣ್ಣಾ ಪಿ,ಎಸ್,ಐ (ಅವಿ), ಸಿಬ್ಬಂದಿಯವರಾದ ಶಿವಾನಂದ ಎಎಸ್‌ಐ, ದೇವಿಂದ್ರಪ್ಪ ಎಎಸ್‌ಐ, ಶರಣಗೌಡ, ಈರಣ್ಣಾ, ಭಗವಂತ್ರಾಯ; ರಾಮಲಿಂಗ, ಬಸವರಾಜ ಕಲಶೆಟ್ಟಿ, ಬಸವರಾಜ ಚಿಂಚೊಳಿ, ಸತೀಶ ಕಾಸರ, ಸತೀಶ ಸೂರ್ಯವಂಶಿ ರವರೆಲ್ಲರೂ ಸೇರಿ ದಿನಾಂಕ 01/03/2021 ರಂದು ದಾಳಿ ಮಾಡಿದ್ದರು. ನರೋಣಾ ಪೊಲೀಸ್ ಠಾಣೆಯ ಗುನ್ನೆ ನಂ 25/2021 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದೆ.