ಕಲಬುರಗಿ, ಫೆ. 28: 101ಕ್ಕೂ ಅಧಿಕ ಮತಗಳಿಂದ ಭೀಮಾಶಂಕರ ಬಿಲಗುಂದಿ ಮುನ್ನಡೆ.
ಹೈ.ಕ.ಸಂಸ್ಥೆಯ ಅಧ್ಯಕ್ಷ ಸ್ಥಾನದ ಮತ ಏಣಿಕೆ ನಡೆಯುತ್ತಿದ್ದು, ಇಲ್ಲಿಯವರೆಗೆ 900 ಮತಗಳ ಏಣಿಕೆ ಕಾರ್ಯ ಮುಗಿದಿದ್ದು, ಭೀಮಾಶಂಕರ ಬಿಲಗುಂದಿ ಅವರು ಅತೀ ಹೆಚ್ಚು ಅಂದರೆ 423 ಮತಗಳು ಗಳಿಸುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಸವರಾಜ ಭೀಮಳ್ಳಿಯಿಂದ 101 ಮತಗಳ ಅಂತರದಿoದ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಶಶಿಲ್ ನಮೋಶಿ ಅವರು 221 ಮತಗಳನ್ನು ಪಡೆದಿದ್ದಾರೆ.
ಇನ್ನು 500ಕ್ಕೂ ಹೆಚ್ಚು ಮತಗಳ ಏಣಿಕೆ ಬಾಕಿ ಇದ್ದು, ಯಾರು ಅಧ್ಯಕ್ಷ ಸ್ಥಾನಕ್ಕೆ ಲಗ್ಗೆ ಹಾಕಲಿದ್ದಾರೆ ಎಂಬುದು ಇನ್ನು ಒಂದು ಗಂಟೆಯಲ್ಲಿ ತಿಳಿಯಲಿದೆ.