ಹೆಚ್.ಕೆ.ಇ. ಚುನಾವಣೆ ಫಲಿತಾಂಶ ಭೀಮಳ್ಳಿ ಪೆನಾಲ್‌ಗೆ ಹೆಚ್ಚು ಸ್ಥಾನ ಅಧ್ಯಕ್ಷ ಬಿಲಗುಂದಿ ಮುಂಚೂಣಿಯಲ್ಲಿ

0
1626

ಕಲಬುರಗಿ, ಫೆ. 26: ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಿನ್ನೆ ನಡೆದ ಚುನಾವಣೆಯ ಫಲಿತಾಂಶ ಲಭ್ಯವಾಗಿದ್ದು, ಭೀಮಳ್ಳಿ ಪೆನಾಲ್‌ಗೆ ಬಂಪರ್ ಫಲಿತಾಂಶ ಬಂದಿದೆ.
ಕಲಬುರಗಿ, ಫೆ. 28: ಭೀಮಳ್ಳಿ ಪೆನಾಲ್‌ನಿಂದ ಉಪಾಧ್ಯಕ್ಷರಾಗಿ ಡಾ. ಶರಣಬಪಸ್ಪ ಹರವಾಳ ಅವರು ಅತಿಹೆಚ್ಚು ಅಂದರೆ 450 ಅಧಿಕ ಮತಗಳ ಅಂತದಿAದ ಜಯಗಳಿಸಿದ್ದಾರೆ. (887) ಅವರ ಪ್ರತಿಸ್ಪರ್ಧಿ ಡಾ. ಶಿವಾನಂದ ದೇವರಮನಿ ಅವರನ್ನು 475 ಮತಗಳಿಂದ ಸೋಲಿಸಿದ್ದು, ದೇವರಮನಿ ಅವರಿಗೆ 372 ಮತ್ತು ಆರ್. ಎಸ್. ಹೊಸಗೌಡರಿಗೆ 226 ಮತಗಳು ಬಂದವು.
ಬಿಲಗುAದಿ ಮುಂಚೂಣಿಯಲ್ಲಿ
ರವಿವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಮತ ಏಣಿಕೆ ಸಂಜೆ ಹೊತ್ತಿಗೆ ಕಾರ್ಯಕಾರಿ ಸಮಿತಿ ಸದಸ್ಯರುಗಳ ಹಾಗೂ ಉಪಾಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನದ ಮತ ಏಣಿಕೆ ಕಾರ್ಯವು ಇನ್ನು ಪ್ರಗತಿಯಲ್ಲಿದೆ, ರಾತ್ರಿ 10.10ರ ವರದಿಯಂತೆ ಬಸವರಾಜ ಭೀಮಳ್ಳಿ ಅವರಿಗೆ 304 ಮತಗಳು, ಭೀಮಾಶಂಕರ ಬಿಲಗುಂದಿ ಅವರಿಗೆ 404 ಮತಗಳು ಹಾಗೂಈ ನಮೋಶಿ ಅವರಿಗೆ 221 ಮತಗಳು ಬಂದವು. ಒಟ್ಟು 1465 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 700ಕ್ಕೂ ಅಧಿಕ ಮತಗಳ ಏಣಿಕೆ ನಡೆಯುತ್ತಿದೆ. ರಾತ್ರಿ ಸುಮಾರು 11.30ರ ವರೆಗೆ ಸಂಪೂರ್ಣ ಫಲಿತಾಂಶ ಹೊರಬಿಳುವ ಸಾಧ್ಯತೆಯಿದೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಹಾದೇವಪ್ಪ ವಾಯ್. ರಾಂಪುರೆ (787), ಡಾ. ನಾಗೇಂದ್ರ ಎಸ್. ಮಂಠಾಳೆ (680), ಅರುಣಕುಮಾರ ಎಂ. ಪಾಟೀಲ್ (649), ಸಾಯಿನಾಥ ಎನ್.ಡಿ. ಪಾಟೀಲ್ (516), ಎನ್. ಗಿರೀಜಾಶಂಕರ (534), ಡಾ. ರಜನೀಶ ಎಸ್. ವಾಲಿ (544) ಬೀದರ, ವಿನಯ ಎಸ್. ಪಾಟೀಲ (570) ಅವರುಗಳು ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅವರ ಪೆನಾಲ್‌ನಿಂದ 5 ಜನರು ಆಯ್ಕೆಯಾಗಿದ್ದು, ಡಾ.ಶರಣಬಸಪ್ಪ ಕಾಮರೆಡ್ಡಿ (688), ಅರುಣಕುಮಾರ ಎಂ. ಪಾಟೀಲ್ (649), ಬಸವರಾಜ ಜೆ. ಖಂಡೇರಾವ (687), ಸೋಮನಾಥ ಸಿ. ನಿಗ್ಗುಡಗಿ (567), ಡಾ. ಕೈಲಾಸ ಬಿ. ಪಾಟೀಲ್ (581), ಡಾ. ಜಗನ್ನಾಥ ಬಿ. ಬಿಜಾಪೂರ (524),
ಇನ್ನು ಶಶೀಲ್ ನಮೋಶಿ ಪೆನಾಲ್‌ನಿಂದ ಡಾ. ಅನೀಲಕುಮಾರ ಬಿ. ಪಟ್ಟಣ (536), ಆಯ್ಕೆಯಾದ ಏಕಮೇವ ಸದಸ್ಯರಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಲಗುಂದಿ ಪೆನಾಲ್‌ನ ಡಾ. ಶಿವಾನಂದ ದೇವರಮನಿ (372) ಹಾಗೂ ನಮೋಶಿ ಪೆನಾಲ್‌ನಿಂದ ಸ್ಪರ್ಧಿಸಿದ್ದ ಆರ್. ಎಸ್. ಹೊಸಗೌಡ (226) ಅವರುಗಳು ಹೀನಾಯ ಸೋಲನ್ನುಪ್ಪಿದ್ದು, ಉಪಾಧ್ಯಕ್ಷ ಸ್ಥಾನ ಭೀಮಳ್ಳಿ ಪೆನಾಲ್ ಒಲಿದಿದೆ.

LEAVE A REPLY

Please enter your comment!
Please enter your name here