ಕಲಬುರಗಿ, ಫೆ. 25: ಮಿತಿ ಮೀರಿದ ಸಾಲದ ಬಾಧೆಯಿಂದ ವ್ಯಕ್ತಿಯೋರ್ವ ವಿಷ ಸೇವಿಸಿ ಸಾವಿಗೀಡಾದ ಘಟನೆ ನಗರದ ರಾಮ ಮಂದಿರ ಹತ್ತಿರ ಇಂದು ಬೆಳಿಗ್ಗೆ ಸಂಭವಿಸಿದೆ.
ಶoಕರ ಬಿರಾದಾರ ಎಂಬ ವ್ಯಕ್ತಿಯು ವಿಷ ಸೇವೆಸಿ ರಸ್ತೆ ಮೇಲೆ ಬಿದ್ದಾಗ ಸಾರ್ವಜನಿಕರು ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಸಾಲದ ಕಾಟ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಶಂಕರ ಬಿರಾದಾರ ಡೆತ್ ನೋಟ್ ಬರೆದು ವಿಷ ಸೇವಿಸಿದ್ದಾನೆಂದು ಆತನ ಪತ್ನಿ ಶೈಲಜಾ ಬಿರಾದಾರ ಅವರು ವಿವಿ ಪೋಲಿಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ವಿವಿ ಪೋಲಿಸ್ ನಡೆಸಿದ್ದಾರೆ.