ಬಿಜೆಪಿ ತೊರೆದು ಜೆಡಿಎಸ್ ಸೇರಿದ ಯಾಕಾಪೂರ

0
1182

ಚಿಂಚೋಳಿ,ಫೆ.15- ಬಿಜೆಪಿಯಿಂದ ಚಿಮ್ಮನಚೋಡ ಜಿಲ್ಲಾ ಪಂಚಾಯತ್ ಕ್ಷೇತ್ರದ ಸಂಜೀವನ ಯಾಕಾಪೂರ ಅವರು ಬಿಜೆಪಿ ತೊರೆದು ತಮ್ಮ ಅಪಾರ ಬೆಂಬಲಿಗರೊAದಿಗೆ ಜಾತ್ಯಾತೀತ ಜನತಾ ದಳ ಸೇರ್ಪಡೆಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಅವರನ್ನು ಪಕ್ಷದ ವರಿಷ್ಠ ನಾಯಕರು ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು, ಯಾಕಪೂರ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿ ಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ. ಜೆಡಿಎಸ್ ಪಕ್ಷದ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಕೇದರಲಿಂಗಯ್ಯ ಹಿರೇಮಠ. ಜೆಡಿಎಸ್ ಮುಖಂಡರಾದ ನಾಸೀಸ ಹುಸೇನ್ ಉಸ್ತಾದ. ಕೃಷ್ಣಾರೆಡ್ಡಿ. ವಿಷ್ಣುಕಾಂತ ಮೂಲಗಿ. ಶಾಮರಾವ ಸೂರನ್. ಮಲ್ಲನಗೌಡ ಬೇಡಸುರ್. ನಾಗೇಂದ್ರಪ್ಪ ಗುರಂಪಲ್ಲಿ. ಬಸವರಾಜ ಸಿರಿಸಿ. ಚಂದ್ರಕಾAತ ಸಾಸರ್ಗಾವ. ರಘುನಾಥ ದೇಸಾಯಿ. ಸಂಜು ಕಡಗದ. ಸುರೇಶ. ಶಾಂತಲಿAಗಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ಯಾಕಪೂರ ಇದೇ ಕಾರ್ಯಕ್ರಮದಲ್ಲಿ ಸಂಜೀವನ ಯಾಕಪೂರ ಅವರ ಅಪಾರ ಬೆಂಬಲಿಗರು ಸಹ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

LEAVE A REPLY

Please enter your comment!
Please enter your name here