ಕೇಂದ್ರದ ಕೃಷಿ ಕಾನೂನುಗಳ ವಿರೋಧಿಸಿ ಕಾಂಗೈನಿAದ ಎತ್ತಿನ ಬಂಡಿ ಮೂಲಕ ಪ್ರತಿಭಟನೆ

0
1060

ಕಲಬುರಗಿ, ಫೆ.15-ಕೇಂದ್ರ ಸರಕಾರದ ಮೂರೂ ರೈತ ವಿರೋಧಿ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ತೈಲ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಎತ್ತಿನ ಬಂಡಿಯೊAದಿಗೆ ನಡೆದ ಪ್ರತಿಭಟನಾ ಮೆರವಣಿಗೆ ನಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನೀಲಕಂಠರಾವ ಮೂಲಗೆ, ಜಿ.ಪಂ.ಮಾಜಿ ಸದಸ್ಯ ಸಂತೋಷ ಪಾಟೀಲ ಧಣ್ಣೂರ, ಮುಖಂಡರಾದ ಹುಲಿಗೆಪ್ಪ ಕನಕಗಿರಿ, ಲಾಲ್ ಅಹ್ಮದ್, ಮಾಜಿ ಮೇಯರ್ ದಶರಥ ಬಾಬು ಒಂಟಿ, ಕೃಷ್ಣಾಜಿರಾವ ಕುಲಕರ್ಣಿ, ಶಿವಾನಂದ ಹೊನಗುಂಟಿ, ಮಜರ್ ಆಲಂಖಾನ್, ಪ್ರವೀಣ್ ಪಾಟೀಲ ಹರವಾಳ, ರಾಜಗೋಪಾಲರೆಡ್ಡಿ, ರಾಜೀವ್ ವಿ.ಜಾನೆ, ಶರಣಕುಮಾರ ಮೋದಿ, ರವಿ ರಾಠೋಡ್, ಶಾಮ ನಾಟಿಕಾರ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲತಾ ರವಿ ರಾಠೋಡ್, ಚಂದ್ರಿಕಾ ಪರಮೇಶ್ವರ, ಎಸ್.ಎ.ರಹೆಮಾನ್, ಅಶೋಕ, ಸಂತೋಷ ಮೇಲ್ಮನಿ, ಕಾಶಿನಾಥ ಹಾದಿಮನಿ, ಚನ್ನಬಸಯ್ಯ ನಂದಿಕೋಲ, ಅಂಬ್ರೀಷ್ ಧನಕರ್, ರವಿ ರಾಠೋಡ್, ಸೋಮಶೇಖರ ಎಚ್.ಎಂ., ಮಹೇಂದ್ರ ವರವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಒಂದು ಕಡೆ ರೈತರು ಕರಾಳ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿದೆ. ಸರ್ಕಾರ ಕೂಡಲೇ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇಂದ್ರ ಸರ್ಕಾರ ತಕ್ಷಣವೇ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಸಂಸತ್ ಅಧಿವೇಶನ ಕರೆದು ಈ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕು, ಪ್ರಧಾನಿ ನರೇಂದ್ರ ಮೋದಿ ಅವರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ ಎಂದು ತಕ್ಷಣವೇ ಘೋಷಣೆ ಮಾಡಬೇಕು, ದೆಹಲಿಯಲ್ಲಿ ಚಳವಳಿ ನಡೆಸುತ್ತಿರುವ ರೈತ ಪ್ರತಿನಿಧಿಗಳೊಂದಿಗೆ ಪ್ರಧಾನಿ ಖುದ್ದಾಗಿ ಮಾತನಾಡಬೇಕು ಎಂದು ಆಗ್ರಹಪಡಿಸಿದರು.

LEAVE A REPLY

Please enter your comment!
Please enter your name here