ಕಲಬುರಗಿ, ಫೆ. 4: ಕಾಂಗೈ ಹಿಡಿತದಲ್ಲಿರುತ್ತಿದ್ದ ಸಗಟು ಮಾರಾಟ ಮಹಾಮಂಡಳಿಯ (ಜನತಾ ಬಜರಾ) ಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಕಾಂಗೈಗೆ ಮುಖಭಂಗವಾಗಿದೆ.
ಒಟ್ಟು 21 ಸದಸ್ಯ ಬಲದ ಜನತಾ ಬಜಾರದಲ್ಲಿ ಕಾಂಗೈ, ಬಿಜೆಪಿ, ಜೆಡಿಎಸ್ ಬೆಂಬಲಿತ 19 ಸದಸ್ಯರು ಆಯ್ಕೆಯಾಗಿದ್ದರು. ಇಬ್ಬರು ಸರಕಾರದ ನಾಮನಿರ್ದೇಶನ ಸದಸ್ಯರು ಕೂಡಿ ಒಟ್ಟು 21.
ಕಳೆದ ತಿಂಗಳು ಚುನಾವಣೆ ಪ್ರಕ್ರಿಯೆ ಆರಂಭವಾಗದೇ ಸ್ಥಗಿತಗೊಂಡಿದ್ದರಿAದ ಇಂದು ಮತ್ತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ದತ್ತಾತ್ರೇಯ ಫಡ್ನೀಸ್ (11ಮತಗಳು) ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ವಂದನಾ ವಿ. ಮಂಗಳೂರು (11ಮತಗಳು) ಅವರು ಒಂದು ಮತಗಳಿಂದ ಆಯ್ಕೆಯಾದರು.
ಕಾಂಗ್ರೆಸ್‌ನಿAದ ಮಜರ ಆಲಂಖಾನ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಅವರಿಗೆ 10 ಮತಗಳು ಬಂದು ಕೇವಲ ಒಂದು ಮತದಿಂದ ಪರಾಭವಗೊಂಡರು, ಕ್ರಮವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇನ್ನೋರ್ವ ಕಾಂಗೈ ಸದಸ್ಯ ರಮೇಶ ಕಮಲಾಪುರ ಅವರು ಕೂಡಾ ಒಂದು ಮತದಿಂದ ಸೋಲುಂಡರು.
ಜೆಡಿಎಸ್‌ನ ಓರ್ವ ಸದಸ್ಯರಾಗಿ ಶಿವಾಜಿ ಸೂರ್ಯವಂಶಿ ಅವರು ಬಿಜೆಪಿ ಪರ ಮತದಾನ ಮಾಡಿದರು.
ಅಲ್ಲದೇ ಇನೋರ್ವ ಸದಸ್ಯ ಅಣವೀರ ಕಾಳಗಿ ಕೂಡಾ ಬಿಜೆಪಿ ಪರ ಮತದಾನ ಮಾಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮತ್ತು ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ನಡೆಸಿತ್ತು.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಿತೇಶ ಸುಗೂರ ಕಾರ್ಯನಿರ್ವಹಿಸಿದರು.
Home Featured Kalaburagi ಕಲಬುರಗಿ ಜನತಾ ಬಜಾರ ಬಿಜೆಪಿ ತೆಕ್ಕೆಗೆ ಅಧ್ಯಕ್ಷರಾಗಿ ಫಡ್ನೀಸ್, ವಂದನಾ ಉಪಾಧ್ಯಕ್ಷರಾಗಿ ಆಯ್ಕೆ