ಧರ್ಮಾಪೂರ ಬಳಿ ಅಪಘಾತ ಮಹಿಳಾ ವೈದ್ಯ ಯುವತಿ ಸಾವು

0
1633

ಕಲಬುರಗಿ, ಜ. 12: ತಾಲೂಕಿನ ಧರ್ಮಾಪೂರ ಇಂದು (ಮಂಗಳವಾರ) ಸಾಯಂಕಾಲ 7.20 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಕಲಬುರಗಿಯಿಂದ ಮರತೂರ ಹೋಗುವ ಮಾರ್ಗದಲ್ಲಿ ಅಪರಿಚಿತ ನಾಲ್ಕು ಚಕ್ರದ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡಿದ ಪರಿಣಾಮವಾಗಿ ಯುವತಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಪ್ಲೇಸರ್ ಸ್ಕೂಟಿ ಗಾಡಿಯ ಮೇಲೆ ಹೊರಟಿದ್ದ ಎಂಬಿಬಿಎಸ್ ಮುಗಿಸಿ, ಎಂ.ಡಿ. ಓದುತ್ತಿರುವ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಎಂಬ 21 ವರ್ಷದ ಯುವತಿಯೇ ಸಾವನ್ನಪ್ಪಿದ ನೃತದೃಷ್ಟಿಯಾಗಿದ್ದಾಳೆ.
ಮೃತಪಟ್ಟ ಯುವತಿ ಭಂಕೂರ ನಿವಾಸಿಯಾಗಿದ್ದಾಳೆ.
ಪ್ಲೇಸರ್ ಗಾಡಿ ನಂ. ಕೆಎ 32, ಎಕ್ಸ್ 1848 ಎಂಬ ನಂಬರಿನ ವಹಿಕಲ್ ಮೇಲೆ ಯುವತಿ ಕಲಬುರಗಿಯಿಂದ ಮರತೂರ ಹೋಗುವಾಗ ಮಾರ್ಗ ಮಧ್ಯದಲ್ಲಿರುವ ಧರ್ಮಾಪೂರ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕಲಬುರಗಿ ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಪೋಲಿಸರು ಕೈಗೊಂಡಿದ್ದಾರೆ.
ಘಟನೆಯ ಬಗ್ಗೆ ವಿವರವಾಗಿ ತಿಳಿಸಿದ ಸಂಚಾರಿ ಠಾಣೆಯ ಪಿಐ ಶಾಂತಿನಾಥ ಅವರು, ಅಫಘಾತದಲ್ಲಿ ಮೃತಪಟ್ಟಿ ಯುವತಿಯ ಶವ ಪರೀಕ್ಷೆ ನಡೆಯುತ್ತಿದ್ದು, ವಾಹನಕ್ಕೆ ಡಿಕ್ಕಿ ಹೊಡೆದ ಪ್ರಕರಣದ ಕುರಿತು ತನಿಖೆ ನಡೆಸಿಸರುವುದಾಗಿ ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here