ಕಲಬುರಗಿ.ನ.7: ನಗರದ ಮಹಾತ್ಮಾ ಬಸವೇಶ್ವರ್ ರಸ್ತೆಯಲ್ಲಿನ ಫುಡಝೋನ್ ಹತ್ತಿರದ ನಿರ್ಮಾಣ ಹಂತದ ಕಟ್ಟಡದ ಬಳಿ ಕಳೆದ ಅಕ್ಟೋಬರ್ 10ರಂದು ನಡೆದ ಫಾರ್ಮಸಿ ಕಾಲೇಜು ವಿದ್ಯಾರ್ಥಿ ಸಲಾಂ ದಸ್ತಗೀರ್ ಕೊಲೆ ಪ್ರಕರಣಕ್ಕೆ ಸಂಬA ಧಿಸಿದಂತೆ ಪೋಲಿಸರು ಐವರು ಆರೋ ಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿ ದ್ದಾರೆ.
ಬಂಧಿತರನ್ನು ಶಾಬಾಸ್, ಸೋಹೆಲ್, ನದೀಮ್, ಜುಬೇರ್ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಹಾಗೂ ಹತ್ಯೆಗೆ ಒಳಗಾದ ವಿದ್ಯಾರ್ಥಿ ಗೆಳೆಯರೇ ಆಗಿದ್ದು, ಕುಡಿದ ನಿಶೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಸಲಾಂ ದಸ್ತಗೀರ್‌ನಿಗೆ ಕೆಳಗೆ ದಬ್ಬಿದ್ದರಿಂದ ಆತ ಸಾವನ್ನಪ್ಪಿದ್ದ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚಾರಣೆ ಮುಂದುವರೆಯುತ್ತಿದೆ ಎಂದು ನಗರ ಪೋಲಿಸ್ ಉಪ ಆಯುಕ್ತ ಕಿಶೋರಬಾಬು ಅವರು ಮಾಧ್ಯಮಗಳಿಗೆ ಹೇಳಿದರು.