ಸೀತಾಫಲ ತರಲು ಹೋದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವು

0
2236

ಕಲಬುರ್ಗಿ, ಅ. 12: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳಿಗಳಲ್ಲಿ ಕಿರದಾದ ಸೇತುವೆಗಳು ಹಾಗೂ ಹಳ್ಳಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದ ಇದರಿಂದ ಹಳ್ಳಿಗಳಲ್ಲಿನ ಜನರ ಬದುಕು ದುಸ್ತರವಾಗಿದೆ ಅಲ್ಲದೇ ಅವರ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂಬುದು ದಕ್ಕೆ ಒಂದು ಜೀವಂತ ಉದಾಹರಣ ನೀರಿನ ರಭಸಕ್ಕೆ ಕೊಚ್ಚಿ ಹೊದ ಮಹಿಳೆಯೆ ಆಗಿದ್ದಾಳೆ.
ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಸಿಕ್ಕು ನೀರಿನಲ್ಲಿ ಕೊಚ್ಚಿ ಹೋಗಿ ಮಹಿಳೆ ಸಾವನ್ನಪ್ಪಿದ ಘಟನೆ ಕಮಲಾಪುರ ತಾಲೂಕಿನ ಮರಗುತ್ತಿ ತಾಂಡಾ ಬಳಿ ನಡೆದಿದೆ.
ಘಟನೆ ತಾಂಡಾ ಬಳಿಯ ಹಳ್ಳದಲ್ಲಿ ನಡೆದಿದ್ದು, ಶವವಾಗಿ ಪತ್ತೆಯಾದ ಮಹಿಳೆ ಮರಗುತ್ತಿ ತಾಂಡಾ ನಿವಾಸಿ ಸುಮಾರು 40 ವರ್ಷ ವಯಸ್ಸಿನ ಮಹಿಳೆ ಶಾಂತಾಬಾಯಿ (40) ಎಂದು ಗುರುತಿಸಲಾಗಿದೆ.
ಮೃತ ದುರ್ದೈವಿ ಮಹಿಳೆ ಸೀತಾಫಲ ಹಣ್ಣು ತರಲು ಬೆಟ್ಟಕ್ಕೆ ಹೋಗಿದ್ದ ಮಹಿಳೆ ವಾಪಸ್ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಹಳ್ಳದ ದಡದ ಮರದ ಕೊಂಬೆಯಲ್ಲಿ ಇಂದು ಶವ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here