ಕಲಬುರಗಿ, ಸೆ. 9: ಕೊರೊನಾ ಸೋಂ ಕಿಗೆ ಸೇವೆಯಲ್ಲಿರುವ ಇನ್ಸ್ಪೇಕ್ಟರ್ ಆದ ಎಸ್. ಎಂ. ಯಾಳಗಿ ಅವರು ಮಂಗಳವಾರ ಬಲಿ ಯಾಗಿದ್ದಾರೆ.
56 ವರ್ಷ ವಯಸ್ಸಿನ ಯಾಳಗಿ ಅವರು ಕಳೆದ ಸುಮಾರು 2 ತಿಂಗಳಿAದ ಕೊರೊನಾ ಸೋಂಕಿನಿAದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ನಿನ್ನೆ ಅವರು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದರು.
ಮೃತಪಟ್ಟಿರುವ ಸಿಪಿಐ. ನಗರದ ಹೊರ ವಲಯದಲ್ಲಿರುವ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಇನ್ಸ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಇನ್ಸ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಕೆಲ ದಿನಗಳ ಕಾಲ ಸ್ಟೇಷನ್ ಬಜಾರ ಠಾಣೆಗೂ ಸಹ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೂಲತಃ ಸುರಪುರ ತಾಲೂಕಿನ ಯಾಳಗಿ ಗ್ರಾಮದವರು.
ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿ ಕೊಂಡಿತ್ತು. ಪರೀಕ್ಷೆಗೊಳಪಡಿಸಿದಾಗ ಕರೊನಾ ಕಾಣಿಸಿಕೊಂಡಿತ್ತು. ಅವರನ್ನು ಚಿಕಿತ್ಸೆಗಾಗಿ ಯುನೈಟೆಡ್ ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಸಹ ಕಂಡು ಬಂದಿತ್ತು. ಮಂಗಳವಾರ ಒಮ್ಮೆಲೇ ಆರೋಗ್ಯ ಏರು ಪೇರಾಗಿ ತೀವ್ರ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ಅರಿಯುತ್ತಲೇ ಈಶಾನ್ಯ ಐಜಿಪಿ ಮನೀಷ ಖರ್ಬೇಕರ್, ಪಿಟಿಸಿ ಪ್ರಾಚಾರ್ಯ ರಾಗಿರುವ ಎಸ್ಪಿ ಯಡಾ ಮಾರ್ಟಿನ್ ಮಾರ್ಬ ನ್ಯಾಂಗ್ ಆಸ್ಪತ್ರೆಗೆ ದೌಡಾಯಿಸಿ ಕುಟುಂಬ ದವರಿಗೆ ಸಾಂತ್ವನ ಹೇಳಿದರು. ಇಡಿ ಇಲಾಖೆ ನಿಮ್ಮೊಂದಿಗೆ ಇರುತ್ತದೆ, ದೈರ್ಯವಾಗಿರಿ ಎಂದು ದೈರ್ಯ ತುಂಬುವ ಪ್ರಯತ್ನವನ್ನು ಮಾಡಿದರು. ಅಲ್ಲದೆ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಗರದ ಇನ್ಸ್ಸ್ಪೆಕ್ಟರ್ ಇನ್ನಿತರ ಸಿಬ್ಬಂದಿ ಆಸ್ಪತ್ರೆಗೆ ದೌಡಾ ಯಿಸಿದರು. ನಿನ್ನೆ ಸಂಜೆ ಅಂತ್ಯಕ್ರಿಯೆ ನಡೆಯಿತು.
ಎಂ.ಎಸ್. ಯಾಳಗಿ ಅವರು ಮೂಲತ ಸುರಪೂರ ತಾಲೂಕಿನ ಯಾಳಗಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ, ಅವರ ಪದವಿ ವಿದ್ಯಾಭಾಸವನ್ನು ನಗರದ ಅಂಬೇಡ್ಕರ್ ಡಿಗ್ರಿ ಕಾಲೇಜಿನಲ್ಲಿ ವಸತಿ ಗ್ರಹದಲ್ಲಿದ್ದು, ಪದವಿ ಪಡೆದು ಮುಂದೆ ಪೋಲಿಸ್ ಇಲಾಖೆಗೆ ಸೇವೆ ಗೆ ಸೇರ್ಪಡೆಗೊಂಡರು.
ಅತೀ ಸರಳ ಹಾಗೂ ಯಾರಿಗೂ ಸಹ ಗದರಿಸಿ ಮಾತನಾಡುವ ಜಾಯಮಾನ ಹೊಂ ದಿದ ಅವರು ಬಹಳ ಕಳಕಳಿಯ ವ್ಯಕ್ತಿಯಾ ಗಿದ್ದರು.
ಅವರ ಕಾಲೇಜು ಮೇಂಟ್ ಒಬ್ಬರ ಪ್ರಕಾರ ಯಾಳಗಿ ಅವರು ತಮ್ಮ ಹಾಸ್ಟೇಲ್‌ನಲ್ಲಿ ತಮ್ಮ ತಾಯಿಯ ಫೋಟೋ ಇಟ್ಟು ದಿನ ಪೂಜೆ ಮಾಡುತ್ತಿದ್ದರೆಂದು ಬಹಳ ಮಾರ್ಮಿಕವಾಗಿ ನುಡಿದರು.