ಕಲಬುರಗಿ, ಆಗಸ್ಟ. ೨೬: ಪತ್ರಕರ್ತರನ್ನು ಹೀನಾಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲೂಟಿಕೋರ, ಭ್ರಷ್ಟ ಪತ್ರಕರ್ತರೆಂದು ಜರಿದ ನಕಲಿ ಆರ್.ಟಿ.ಐ. ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ವಿರುದ್ಧ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಈರೆಗೆ ಪೋಲಿಸರು ಆತನನ್ನು ಬಂಧಿಸಲು ಮೀನಾಮೇಷ ಎನಿಸುತ್ತಿದ್ದಾರೆ.
ಐ.ಪಿ.ಸಿ. ಕಲಂ ೩೮೪ ಮತ್ತು ೪೨೦ ಅನ್ವಯ ಗುನ್ಹೆ ದಾಖಲಿಸಿಕೊಂಡು ಹದಿನೈದು ದಿನಕಳೆದರೂ ಕೂಡಾ ಇಲ್ಲಿಯ ವರೆಗೆ ಬಂಧಿಸದೇ ಇರುವುದು ಪೋಲಿಸರ ಕರ್ತವ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಪತ್ರಕರ್ತರಿಗೆ ಈ ಗತಿ ಬಂದರೆ ಸಾರ್ವಜನಿಕರ ಪಾಡೇನು ಎಂಬAತಾಗಿದ್ದು, ತಾನೊಬ್ಬ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಳ್ಳುವ ಸಿದ್ರಾಮಯ್ಯ ಹಿರೇಮಠ ಬಗ್ಗೆ ಈಗಾಗಲೇ ಬೇರೇ ಬೇರೆ ಪ್ರಕರಣಗಳಲ್ಲಿ ಸ್ಟೇಷನ್ ಬಜಾರ, ಚಿಂಚೋಳಿ ತಾಲೂಕಿನ ಕೋಂಚಾವರA ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಲ್ಲಿ ಸ್ಮರಿಸಬಹುದು.
ಈ ಪ್ರಕರಣ ರಾಜಕೀಯ ಬಣ್ಣಕ್ಕೆ ತಿರುಗಿದ್ದು, ಜಿಲ್ಲಾ ಉಸ್ತುವಾರ ಸಚಿವ ಗೋವಿಂದ ಕಾರಜೋಳ ಅವರ ಗಮನ ಕೂಡ ಈ ಪ್ರಕರಣದ ಬಗ್ಗೆ ಸೆಳೆದಿದ್ದು, ಅವರ ಮಾತಿಗೂ ಇಲ್ಲಿ ಕವಡೆ ಕಾಸಿನ ಕಿಮ್ಮತಿಲ್ಲ.
ಈ ಬಗ್ಗೆ ಇಲಾಖೆಯಾಗಲೀ ಗೃಹ ಸಚಿವರಾಗಲೀ ಕೂಡಲೇ ಗಮನಹರಿಸಿ ಆರೋಪಿಯನ್ನು ಕೂಡಲೇ ಬಂಧಿಸಬೇಕು ಇಲ್ಲದಿದ್ದರೇ ಪತ್ರಕರ್ತರ ಸಂಘವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಚ್ಚರಿಕೆ ನೀಡಿದೆ.