ರಾಜ್ಯ ಸರಕಾರದಿಂದ ತಳವಾರ ಜನಾಂಗಕ್ಕೆ ಅನ್ಯಾಯ : ಎಂ.ವೈ. ಪಾಟೀಲ್

0
987

ಕಲಬುರಗಿ, ಆಗಸ್ಟ. 17: ಕೇಂದ್ರ ಸರ ಕಾರವು ತಳವಾರ ಮತ್ತು ಪರಿವಾರ ಜನಾಂಗ ದವರಿಗೆ ಕಳೆದ ಮಾರ್ಚನಲ್ಲಿ ಎಸ್.ಟಿ.ಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದರೂ ಅಧಿಕಾರಿಗಳು ಎಸ್.ಟಿ. ಪ್ರಮಾಣ ಪತ್ರ ನೀಡುತ್ತಿಲ್ಲ, ಕೂಡಲೇ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಶಾಸಕ ಎಂ. ವೈ. ಪಾಟೀಲ್ ಅವರು ಆಗ್ರಹಿ ಸಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಪತ್ರ ಕರ್ತರೊಂದಿಗೆ ಮಾತನಾಡುತ್ತ ಕರ್ನಾಟಕ ರಾಝ್ಯ ಸರಕಾರವು ಕೂಡ ಈಗಾಗಲೇ ಜೂನ್‌ನಲ್ಲಿಯೇ ತಳವಾರ ಮತ್ತು ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ, ಈ ಜಾತಿಗಳನ್ನು ಈ ಹಿಂದೆ ಇದ್ದ ಪ್ರವರ್ಗ-1ರ ಜಾತಿ ಪಟ್ಟಿಯಿಂದ ತೆಗೆದುಹಾಕಿದೆ. ಹೀಗಿದ್ದೂ ಅಧಿಕಾರಿಗಳು ತಳವಾರ ಮತ್ತು ಪರಿವಾರ ಜನಾಂಗದ ವರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡುತ್ತಿಲ್ಲ, ವಿನಾಕಾರಣ ಗೊಂದಲ ಸ್ಪಷ್ಟಿಸುತ್ತಿದ್ದು, ಇದರಿಂದ ಸದರಿ ಜನಾಂಗದ ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ರೈತರು ಜಾತಿ ಪ್ರಮಾ ಣಪತ್ರ ಸಿಗದೇ ಸರಕಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯು ಮನಸ್ಸಿಗೆ ಬಂದAತೆ ಆದೇಶ ಗಳನ್ನು ತಿರುಚುತ್ತಿದೆ, ಕೇಂದ್ರ ಸರಕಾರದ ಆದೇಶವನ್ನು ರಾಜ್ಯ ಸರಕಾರವು ಪಾಲಿಸದೆ ಈ ಜನಾಂಗದವರಿಗೆ ಅನ್ಯಾಯ ಮಾಡುತ್ತಿ ದೆ ಎಂದು ಅವರು ಹೇಳಿದರು.
ಈ ಬಗ್ಗೆ ವಿಧಾನಸಭೆಯಲ್ಲಿ ಸದನದಲ್ಲಿ ಅರ್ಹ ಫಲಾನುಭವಿಗಳಿಗೆ ನ್ಯಾಯಸಿಗಲು ಬೆಳಕು ಚೆಲ್ಲುತ್ತೇನೆ ಎಂದು ಹೇಳಿದರು.
ಕೂಡಲೇ ಮುಖ್ಯಮಂತ್ರಿಗಳು ಅಧಿಕಾರಿ ಗಳಿಗೆ ಆದೇಶ ನೀಡಿ ಈ ಜನಾಂಗದವರಿಗೆ ಎಸ್.ಡಿ. ಪ್ರಮಾಣ ನೀಡಿ ನ್ಯಾಯ ಒದಗಿಸ ಬೇಕೆಂದು ಆಗ್ರಹಸಿದರು.

LEAVE A REPLY

Please enter your comment!
Please enter your name here