ಕಲಬುರಗಿ, ಜು. 15: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಾಗೂ ಸಮುದಾಯಗಳಲ್ಲಿ ಈ ರೋಗ ಹರಡುವ ಭೀತಿಯ ಹಿನ್ನೆಲೆಯಲ್ಲಿ ಒಂದು ವಾರ ಘೋಷಿಸಿದ ಲಾಕ್‌ಡೌನ್ ಬುಧುವಾರ ಸಂಪೂರ್ಣವಾಗಿ ಲಾಕ್ ಆಗಿದೆ.
ನಗರದ ಮುಖ್ಯ ಬೀದಿಗಳಿಂದ ಹಿಡಿದು ಬಡಾವಣೆಯ ಬೀದಿ ಬೀದಿಗಳಲ್ಲಿಯೂ ಯಾವುದೇ ಅಂಗಡಿ, ಮುಂಗಟ್ಟುಗಳು ತೆರೆದ ದೃಶ್ಯ ಎಲ್ಲಿಯೂ ಕಂಡುಬAದಿಲ್ಲ. ಅಲ್ಲಲ್ಲಿ ಕೆಲವು ರಸ್ತೆಗಳಲ್ಲಿ ಪೋಲಸ್‌ರು ಇದ್ದರೂ ಕೂಡಾ ಅಟೋಗಳ ಓಡಾಟ ನಡೆದಿದ್ದು ಬಿಟ್ಟರೆ ಎಲ್ಲಡೆ ಲಾಕ್‌ಡೌನ್ ಸಂಪೂರ್ಣವಾಗಿತ್ತು.
ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆ ಈ ಲಾಕ್‌ಡೌನ್‌ಗೆ ಮತ್ತಷ್ಟ ಮೇರಗು ನೀಡಿದೆ.ಹಾಲು, ಹಣ್ಣು, ತರಕಾರಿ, ಮೆಡಿಕಲ್ ಶಾಪೀಗಳು, ಕೃಷಿ ಔಷಧ ಅಂಗಡಿಗಳು, ದಿನಸಿ ಅಂಗಡಿ ಗಳು ಬಿಟ್ಟರೆ ಎಲ್ಲಿಯೂ ಯಾವುದೇ ಅಂಗಡಿ ತೆರೆದಿರಲಿಲ್ಲ.
ಬೆಳಿಗ್ಗೆ 8 ರಿಂದ 2ರ ವರೆಗೆ ಮಾತ್ರ ಬಂಕ್ ತೆರೆಯಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೇಟ್ರೋಲ್‌ಗಾಗಿ ಪರದಾಡಿದ ದೃಶ್ಯ ಅಲ್ಲಲ್ಲಿ ಕಂಡುಬAದಿತು.
ಬಾರ್, ಎಂಎಸ್.ಐ.ಎಲ್.ಗಳು ಸಂಪೂರ್ಣ ಬಂದ್ ಮಾಡಿದ ಹಿನ್ನೆಲೆಯಲ್ಲಿ ಮದ್ಯ ಪ್ರೀಯರು ಹಳ್ಳಿಗಳಿಗೆ ಹೋಗಿ ಕುಡಿದು, ಪಾರ್ಸ್ಲ ತರುತ್ತಿರುವುದು ಕೂಡಾ ಕಂಡುಬAದಿತು.
ಸೂಪರ್ ಮಾರ್ಕೇಟ್, ಕಿರಾಣಾ ಬಜಾರ, ಕಪಡಾ ಬಜಾರ, ಫೋರ್ಟ್ ರೋಡ, ಗಂಜ್ ಪ್ರದೇಶ, ತರಕಾರಿ ಮಾರುಕಟ್ಟೆಗಳು, ಕಂಪ್ಲಿಟ್ ಬಂದ್ ಆಗಿದ್ದವು.
ಇಂದು ಲಾಕ್‌ಡೌನ್ ಎರಡನೇ ದಿನವಾಗಿದ್ದು, ಇನ್ನು 5 ದಿನಗಳ ಕಾಲ ಮುಂದುವರೆಯಲಿದ್ದು,
ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಒಳ್ಳೆಯ ಬೆಂಬಲ ಸಿಕಿದ್ದು, ಸಾರ್ವಜನಿಕರು ಹೊರಗಡೆ ಹೋಗ ಬೇಕಾದರೆ ಮುಖಕ್ಕೆ ಮಾಸ್ ಧರಿಸಿಯೇ ಓಡಾಡುತ್ತಿದ್ದರು.
ಪೋಲಿಸರ ಕಾರ್ಯ ಶ್ಲಾಘನೀಯ:
ಲಾಕ್‌ಡೌನ್ ಸಂದರ್ಭದಲ್ಲಿ ಪೋಲಿಸರು ಸ್ವಯಂದಿAದ ವರ್ತಿಸಿ, ಮಾತಿನಲ್ಲೇ ಎಚ್ಚರಿಕೆ ನೀಡುವ ಮೂಲಕ ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡದೆ, ಯಶಸ್ವಿಯಾಗಿ ಪರಿಸ್ಥಿತಿ ನಿಭಾಯಿ ಸಿರುವುದು ಶ್ಲಾಘನೀಯವಾಗಿದೆ.
ಅದರಲ್ಲೂ ಚೌಕ್ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೇಕ್ಟರ್ ಎಸ್. ಸಿ. ನಾಯಕ ಅವರು ದ್ವಿಚಕ್ರ ವಾಹನದ ಮೇಲೆ ಓಡಾಡಿ ಎಲ್ಲಡೆ ಸಂದಿ, ಗೊಂದಿಗಳಲ್ಲಿ ಸಂಚರಿಸಿ, ಕೆಲವು ಬಡಾವಣೆಗಳಲ್ಲಿ ಅಂಗಡಿಗಳ ತೆರವುಗೊಳಿಸಿದ್ದನ್ನು ಖುದ್ದು ಹೋಗಿ ಬಂದ ಮಾಡಿಸಿದ ದೃಶ್ಯಗಳು ಹಲವು ಕಡೆ ಕಂಡುಬದವು.