ರಾಜ್ಯಕ್ಕೆ ತಪ್ಪದ ಕೊರೊನಾ ಕಾಟ ಇಂದು 1925 ಜನರಿಗೆ ಸೋಂಕು

    0
    1017

    ಬೆಂಗಳೂರು, ಜು. 5: ರಾಜ್ಯದಲ್ಲಿ ರವಿವಾರ ಸರಕಾರ ಸಂಪೂರ್ಣ ಒಂದು ದಿನ ಲಾಕ್‌ಡೌನ್ ಘೋಷಿಸಿದ್ದರೂ ಕೂಡಾ ಇಂದು ಕೊರೊನಾ ರೋಗದ ಸೋಂಕು 1925 ಜನರಿಗೆ ಆವರಿಸಿದೆ.
    ಇದರಿಂದಾಗಿ ಒಟ್ಟು ಕರ್ನಾಟಕದಲ್ಲಿ 23474 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 9847 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ ಇನ್ನು 13251 ಮಂದಿ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.
    ಪ್ರಥಮ ಸ್ಥಾನ ಪಡೆದ ಬೆಂಗಳೂರು ಕೊರೊನಾಗೆ ಇಂದು 1235 ಹೊಸ ಪ್ರಕರಣಗಳ ದಾಖಲೆ ಆಗಿದ್ದು, ನಿನ್ನೆಯವರೆಗೆ ಇದ್ದ ಮರಣ ಪ್ರಮಾಣ ಇಂದು 145ಕ್ಕೆ ಏರಿಕೆಯಾಗಿದೆ.
    ರಾಜ್ಯದಲ್ಲಿ ಒಟ್ಟು ಇಂದು 37 ಜನರ ಕೊರೊನಾಗೆ ಬಲಿ ಸೇರಿ ಇಲ್ಲಿಯವರೆಗೆ 372 ಮಂದಿ ಸಾವನ್ನಪಿದ್ದಾರೆ.
    ದಕ್ಷಿಣ ಕನ್ನಡದಲ್ಲಿ ಇಂದು 147 ಜನರು ಕೊರೊನಾ ಸೋಂಕಿಗೆ ತುತ್ತಾದರೆ, ಬಳ್ಳಾರಿ 90, ವಿಜಯಪುರ 51, ಕಲಬುರಗಿ 49, ಉಡುಪಿ ಮತ್ತು ಧಾರವಾಡ ತಲಾ 45, ಬೀದರ 29, ಮೈಸೂರು 25, ಕೊಪ್ಪಳ 22, ಉತ್ತರ ಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ, ತುಮಕೂರ, ಕೋಲಾರ ತಲಾ 13, ಬೆಳಗಾವಿ ಮತ್ತು ದಾವಣಗೇರಿಗಳಳ್ಲಿ ತಲಾ 11, ರಾಯಚೂರು ಮತ್ತು ಮಂಡ್ಯದಲ್ಲಿ 10 ಕೊರೊನಾ ಪ್ರಕರಣಗಳು ದಾಖಲಾದರೆ ಉಳಿದ ಏಳು ಜಿಲ್ಲೆಗಳಲ್ಲಿ ಒಂದAಕಿಯಲ್ಲಿದ್ದು, ಇನ್ನು ಯಾದಗಿರಿ, ಬೆಂಗಳೂರು ಗ್ರಾಮಾಂತರ, ಕೊಡಗು ಜಿಲ್ಲೆಗಳಲ್ಲಿ ಇಂದು ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ.

    LEAVE A REPLY

    Please enter your comment!
    Please enter your name here