ಕಲಬುರಗಿ, ಜೂನ್. ೧೯: ಗಾಲ್ವಾನ್‌ದಲ್ಲಿ ಇತ್ತೀಚೆಗೆ ಚೈನಿ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತದ ವೀರ ಯೋಧರನ್ನು ಸ್ಮರಿಸಿ, ಶ್ರದ್ದಾಂಜಲಿಯನ್ನು ಮೋಣದ ಬತ್ತಿ ಹಿಡಿದು ಅರ್ಪಿಸಲಾಯಿತು.
ಶುಕ್ರವಾರ ಸಂಜೆ ೭.೩೦ರ ಸುಮಾರಿಗೆ ನಗರದ ಸರದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಜೆಡಿಎಸ್ ಮುಖಂಡ ನಾಶೀರ್ ಹುಸೇನ್ ಅವರ ನೇತ್ವತ್ವದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಹಮ್ಮದ ಅಲಿಮೋದ್ದಿನ್ ಇನಾಮದಾರ್, ಕಲೀಮ್ ವಕೀಲರು, ಹಬಿದ್ ಸರಮದ್, ಶಾದಬ್ ಮಲ್ಲಿಕ್, ಅಜೀಮ್ ಶೇಖ, ಅಲಿ ಉಲ್ಲಾಸಾಬ್, ಆಜಮ್ ಪಟೇಲ್, ಇರ್ಷದ್ ಜೈದಿ ಅವರೊನ್ನಳಗೊಂಡAತೆ ಸುಮಾರು ೫೦ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದದರು.