ವಿಧಾನ ಪರಿಷತ್‌ಗೆ ಮ್ಯಾಕೇರಿ ನೇಮಿಸಲು ಆಗ್ರಹ

0
993

ಕಲಬುರಗಿ, ಜೂನ್. 11: ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಉಪಾಧ್ಯಕ್ಷರು ಹಾಗೂ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಅಧ್ಯಯನ ಅಕಾಡೆಮಿ ಅಧ್ಯಕ್ಷರಾಗಿರುವ ಅವ್ವಣ್ಣ ಮ್ಯಾಕೇರಿ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಕಲಬುರಗಿ ಜಿಲ್ಲಾ ಕೋಲಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಮುಖಂಡರಾದ ಅವ್ವಣ್ಣ ಪಾಟೀಲ್, ದಯಾನಂದ ಕಟ್ಟಿಮನಿ, ರಾಮ ತಳವಾರ ಅವರುಗಳು ಇಂದಲ್ಲಿ ಪತ್ರಿಕಾಭವನದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲಿ ಮಾತನಾಡುತ್ತ, ಸ್ನಾತಕೋತ್ತರ ಪದವೀಧರರಾದ ಮ್ಯಾಕೇರಿ ಅವರು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಯ ಕೆಲಸ ಮತ್ತು ವಿವಿಧ ಚುನಾವಣೆಗಳಲ್ಲಿ ಸಕ್ರೀಯವಾಗಿ ಪಕ್ಷ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದು, ಕಲಬುರಗಿ ಎಪಿಎಂಸಿಗೆ 2 ಬಾರಿ ಅಧ್ಯಕ್ಷರಾಗಿ ರಾಜ್ಯಕ್ಕೆ ಮಾದರಿಯಾಗುವಂತಹ ಕ್ರಾಂತಿಕಾರಿ ಸುಧಾರಣೆಗಳನ್ನು ರೈತರ ಪರವಾಗಿ ತಂದಿದ್ದು ಹೆಮ್ಮೆಯ ವಿಷಯವಾಗಿ ಎಪಿಎಂಸಿ ಅವ್ವಣ್ಣ ಮ್ಯಾಕೇರಿ ಎಂದೇ ಪ್ರಸಿದ್ಧರಾಗಿದ್ದಾರೆ ಎಂದರು.
ಹೀಗೆ ಸಮಾಜ ಹಾಗೂ ಪಕ್ಷಕ್ಕಾಗಿ ಹಲವಾರು ಹೋರಾಟ ಮಾಡಿದ ಮನೋಭಾವ ಹೊಂದಿದ ಇವರನ್ನು ಕಲಬುರಗಿ ಜಿಲ್ಲೆಯಲ್ಲಿ 2 ಎಂ.ಎಲ್.ಸಿ. ಸ್ಥಾನಗಳು ಖಾಲಿಯಾಗಿದ್ದು, ಅದರಲ್ಲಿ ಒಂದು ಕೋಲಿ ಸಮಾಜಕ್ಕೆ ಹಿಂದಿನ ಸರಕಾರ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ನೀಡಿತ್ತು ಅದು ಈಗ ಖಾಲಿಯಾಗಿದ್ದು ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿ ಅವರನ್ನು ವಿಧಾನ ಪರಿಷತ್‌ನೆ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಕೋಲಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ಬಿಜೆಪಿ ರಾಜ್ಯ ಮುಖಂಡರಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.

LEAVE A REPLY

Please enter your comment!
Please enter your name here