ಕಲಬುರಗಿ, ಜೂನ್, ೮: ನಾಲ್ಕು ಸ್ಥಾನಗಳಿಗೆ ಜೂನ್ ೧೯ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ವಿಶೇಷ ಅಂದರೆ ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಗುರುತಿಸಿ, ಅವರಿಗೂ ಕೂಡಾ ಇಂತಹ ಸ್ಥಾನಗಳನ್ನು ನೀಡಲಾಗುವುದೆಂಬುದನ್ನು ಸಾಬಿತುಪಡಿಸುವ ಮೂಲಕ ಪಕ್ಷಕ್ಕಿಂಗ ವ್ಯಕ್ತ ದೊಡ್ಡವರಿಲ್ಲ ಎಂಬ ಹೈಕಮಾಂಡ ಘೋಷಣೆಗೆ ಭಾರತೀಯ ಜನತಾ ಪಕ್ಷದ ಧುರೀಣ ಧರ್ಮಣ್ಣ ದೊಡ್ಡಮನಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತ, ರಾಜ್ಯಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆ ಆಶ್ವರ್ಯಕರವಾಗಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಪಕ್ಷ ಶಿಸ್ತಿನ ಹಾಗೂ ಕಾರ್ಯಕರ್ತರ ಪಕ್ಷವೆಂಬುವುದಕ್ಕೆ ಇಂದು ಪ್ರಕಟಿಸಿ ಅಭ್ಯರ್ಥಿಗಳೇ ಸಾಕ್ಷಿ, ಇಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಸ್ಥಾನ ಮಾನ ದೊರಕುವ ಬಗ್ಗೆ ಸ್ಪಷ್ಟತೆಯಿದೆ. ಬರೀ ದೊಡ್ಡವರಿಗೆಯೇ ಮನೆ ಹಾಕುವ ಪಕ್ಷ ನಮ್ಮದಲ್ಲ ಎಂದವರು ಹೇಳಿದರು.
ತೀರ ತಳಮಟ್ಟದ ಕಾರ್ಯಕರ್ತರಾಗಿದ್ದ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿರುವುದು ತಮಗೆ ತುಂಬಾ ಹರ್ಷವಾಗಿದೆ ಅಲ್ಲದೇ ಹೈಕಮಾಂಡ ನಿರ್ಧಾರ ಶ್ಲಾಘನೀಯವಾಗಿದೆ ಎಂದರು.