ಕಲಬುರಗಿ, ಮೇ. ೨೬: ಕುಡಿದ ಆಮಲಿನಲ್ಲಿ ನಡೆದ ಜಗಳ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯ ವಾದ ಘಟನೆಯೊಂದು ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ನಗರದ ಸೋನಿಯಾಗಾಂಧಿ ಕಾಲೊ ನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ ಎನ್ನಲಾಗಿದೆ.
ಕೊಲೆಯಾದ ವ್ಯಕ್ತಿ ಖಾಜಾಮಿಯಾ ಗುಡುಮಿಯಾ ಬೇಕ್ರಿವಾಲೆ (೬೦) ಎಂದು ಗುರುತಿಸಲಾಗಿದೆ.
ಖಾಜಾಮಿಯಾ ಬೇಕ್ರಿವಾಲೆ ಕುಡಿದ ಆಮಲಿನ್ಲಿ ಶಹಾನವಾಜ್, ಶಾರುಖ್, ಸೈಯ್ಯದ್ ಅಬ್ಬಾಸ್, ತಾಜುದ್ದೀನ್ ಮತ್ತು ಸಿಕಂದರ್ ಎಂಬುವರೊAದಿಗೆ ಜಗಳ ತೆಗೆದು ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಇವರೆಲ್ಲರೂ ಕೊಪಗೊಂಡು ಖಾಜಾ ಮಿಯಾ ಮೇಲೆ ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿದ್ದ ಆತನು ಆಸ್ಪತ್ರೆಗೆ ಸಾಗಿ ಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದ ಎಂದು ತಿಳಿದು ಬಂದಿದೆ.
ಈ ಸಂಬAಧ ವಿವಿ ಪೋಲಿಸ್ ಠಾ ಣೆಯಲ್ಲಿ ಮೃತ ಖಾಜಾಮೀಯಾ ವಿರು ದ್ಧ ಕೊಲೆಯತ್ನ ಮತ್ತು ಆತನ ಮೇಲೆ ಹಲ್ಲೆ ನಡೆಸಿದ ಐವರ ಮೇಲೆ ಕೊಲೆ ಪ್ರಕರಣ ದಾಖಲು ಮಾಡಿ, ಮುಂದಿನ ತನಿಖೆ ಕೈಗೊಂಡಿದ್ದಾರೆ
Home ಕುಡಿದ ಆಮಲಿನಲ್ಲಿ ಜಗಳ: ವ್ಯಕ್ತಿಯೋರ್ವನ ಕೊಲೆ