ರಾಜ್ಯದಲ್ಲಿ ಇನ್ನು ಮೂರು ವಾರ ಸಂಡೇ ಲಾಕ್‌ಡೌನ್

ಬೆಂಗಳೂರು, ಜುಲೈ. 26: ರಾಜ್ಯದಲ್ಲಿ ಸಂಡೇ ಲಾಕ್‌ಡೌನ್ ಇನ್ನು ಮೂರು ವಾರಗಳ ಕಾಲ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.
ಅನ್‌ಲಾಕ್ 2.0 ನಂತರ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಗಸ್ಟ 2ರ ವರೆಗೆ ಪ್ರತಿ ರವಿವಾರ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್‌ಗೆ ಆದೇಶಿಸಲಾಗಿತ್ತು.
ಮತ್ತೇ ಆದೇಶವನ್ನು ಇನ್ನು 3 ವಾರಗಳ ಕಾಲ ಮುಂದುವರೆಸಲು ನಿರ್ಧರಿಸಿ ಸರಕಾರ ಮರು ಆದೇಶ ನೀಡಿದೆ.