ಇಂದು ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಸಂಡೆ ಲಾಕ್‌ಡೌನ್

ಕಲಬುರಗಿ, ಜು.25- ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲ್ಲಿದ್ದು, ಕೊರೊನಾದ ಚೈನ್ ಲಿಂಕ್ ಬ್ರೆಕ್ ಮಾಡಲು ಇಂದು ರಾತ್ರಿ 9 ಗಂಟೆಯಿAದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಸಂಡೆ ಲಾಕ್‌ಡೌನ್ ಜಾರಿಯಲ್ಲಿರಲಿದೆ.
ಶನಿವಾರ ರಾತ್ರಿ 9 ಗಂಟೆಯಿAದಲೇ ಲಾಕ್‌ಡೌನ್ ಜಾರಿಗೆ ಬರಲಿದೆ. ಜಿಲ್ಲೆಯಾದ್ಯಂತ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಬೇಕಾಬಿಟ್ಟಿ ಓಡಾಡುವುದಕ್ಕೆ ಬ್ರೆಕ್ ಬೀಳಲಿದೆ. ಔಷಧಿ ಅಂಗಡಿ, ಆಸ್ಪತ್ರೆ, ದವಸಧಾನ್ಯ, ತರಕಾರಿ ಸೇರಿದಂತೆ ತುರ್ತು ಅಗತ್ಯದ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವಹಿವಾಟುಗಳು ಬಂದ್ ಆಗಲಿವೆ.
ನಿಷೇಧಾಜ್ಞೆ ಜಾರಿಗೆ ಬರಲಿದ್ದು, ಬೇಕಾಬಿಟ್ಟಿ ರಸ್ತೆಗೆ ಇಳಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲ ಪ್ರದೇಶಗಳಲ್ಲಿ ಹೋಟೇಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವಹಿವಾಟುಗಳು ಬಂದ್ ಆಗಲಿವೆ. ಸಾರಿಗೆ ಬಸ್‌ಗಳು ಸ್ಥಗಿತಗೊಳ್ಳಲಿವೆ. ಆಟೋ, ಟ್ಯಾಕ್ಸಿ ಸೇರಿ ಬಂದ್ ಆಗಲಿದ್ದು, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಖಾಸಗಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿಸಲಾಗಿದೆ.
ಕಳೆದ ಮೂರು ರವಿವಾರದಿಂದ ಸಂಡೆಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ವಾರದ ಕೊನೆ ದಿನಗಳಲ್ಲಿ ಎಣ್ಣೆ ಪ್ರೀಯರು ಮೋಜು ಮಸ್ತಿಯಲ್ಲಿ ತೊಡಗಲು ಈ ಸಂಡೇ ಅವರುಗಳಿಗೆ ಮನೆಯಲ್ಲಿಯೇ ಲಾಕ್‌ಮಾಡಲಿದೆ.
ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಳೆದ ಎರಡು ಮೂರು ತಿಂಗಳಿAದ ಒಂದAಕ್ಕಿಯಲ್ಲಿದ್ದ ಸೋಂಕಿತರ ಸಂಖ್ಯೆ ಬರುಬರುತ್ತ ಎರಡಂಕಿ ತಲುಪಿದ್ದು, ಈಗ ಮೂರು ಅಂಕಿಗೂ ತಲುಪಿದ್ದು, ಮುಂದೆ ನಾಲ್ಕು ಅಂಕಿ ತಪಲುಪದಿರಲಿ ಎಂಬ ದೃಷ್ಟಿಕೋನದಿಂದ ಹಾಗೂ ಕೊರೊನಾ ಚೈನ್ ಒಬ್ಬರಿಂದ ಒಬ್ಬರಿಗೆ ಹರಡದಂತೆ ಬ್ರಕ್ ಹಾಕಲು ಈ ಸಂಡೇಲಾಕ್‌ಡೌನ್ ಮಾಡುತ್ತಲಿದ್ದು, ಅಗಸ್ಟ 2ರ ವರೆಗೆ ಸಂಡೇ ಲಾಕ್‌ಡೌನ್ ಆದೇಶವಿದ್ದು, ಮುಂದಿನ ಪರಿಸ್ಥಿತಿಗನುಗುಣವಾಗಿ ಮುಂದುವರೆಸಬೇಕಾ ಇಲ್ಲವೇ ಎಂಬುವದರ ಬಗ್ಗೆ ಸರಕಾರ ಯೋಚಿಸಿ ಯೋಜನೆ ರೂಪಿಸಲಿದೆ.
ಈ ವೇಳೆ ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಿದ್ದಾರೆ. ಹಾಗಾಗಿ ಜನರು ಮನೆಯಲ್ಲೇ ಇದ್ದು ಸೋಂಕು ಪ್ರಸರಣವನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

Always stay in contact with You’re able to write about Keep reading and discover There are several types of formats and styles of documents.

out some facts about essay writers which you never knew before. current events, personal stories, or new approaches to take care of the increasing difficulties in a particular area of business. your author.