ಮಳಖೇಡದಲ್ಲಿ ಜಯತೀರ್ಥರ ರಥೋತ್ಸವ ಜಿಟಿ ಜಿಟಿ ಮಳೆಯಲ್ಲೂ ಹರಿದು ಬಂದ ಭಕ್ತ ಸಾಗರ

0
529

ಕಲಬುರಗಿ, ಜು. 25: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಶ್ರೀ ಜಯತೀರ್ಥರ ಮೂಲ ವೃಂದಾವನ ಎನ್ ನಿಧಾನ ದಲ್ಲಿ ಟೀಕಾಚಾರ್ಯರ ಮಧ್ಯಾರಾಧನಾ ಮಹೋತ್ಸವ ನಿಮಿತ್ತ ಗುರುವಾರ ಜೋಡು ರಥೋತ್ಸವ ಸಂಭ್ರಮದಿAದ ಜರುಗಿತು.
ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ರಾಜ್ಯ ಸೇರಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ ರಾಜ್ಯಗಳ ಅಪಾರ ಭಕ್ತ ಸಮೂಹ ರಥೋತ್ಸವದ ಸುಂದರ ದೃಶ್ಯ ಕಣ್ತುಂಬಿಕೊAಡರು. ಜಿಟಿ ಜಿಟಿಮಳೆಯಲ್ಲೂ ಅಪಾರ ಪ್ರಮಾಣದಲ್ಲಿ ಭಕ್ತರು ಮಳಖೇಡಕ್ಕೆ ಆಗಮಿಸಿದ್ದರು.

ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಮಳಖೇಡದಲ್ಲಿ ಮೂರು ದಿನ ಆರಾಧನೆ ವೈಭವದಿಂದ ನಡೆಯಲಿದೆ. ಗುರುವಾರ ಮಧ್ಯಾರಾಧನೆ ನಿಮಿತ್ತ ಜೋಡು ರಥೋತ್ಸವ ನಡೆಯಿತು.
ಬೆಳಗ್ಗೆ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಸುಧಾ ಪಾಠ, ಭಕ್ತರಿಗೆ ಮುದ್ರಾಧಾರಣೆ ಮಾಡಿದರು.
ನಂತರ ರಥಾಂಗ ಹೋಮ, ಜೋಡು ರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು. ಅಪಾರ ಭಕ್ತರು ಜಯತೀರ್ಥರ ತೇರು ಎಳೆದು ಧನ್ಯರಾದರು.
ದಾಸರ ವೇಷಭೂಷಣ ಧರಿಸಿದ ಯುವಕರು ಗಮನ ಸೆಳೆದರು. ಹಾಡಿಗೆ ತಕ್ಕಂತೆ ಮಹಿಳೆಯರು ಹೆಜ್ಜೆ ಹಾಕಿದರು.
ಜಯತೀರ್ಥ ಗುರುಭ್ಯೋ ನಮ: ಎಂಬ ಘೋಷಗಳು ಮೊಳಗಿದವು.
ಎದುರಾರೈ ಗುರುವೆ ನಿಮಗೆ ಸಮನಾರೈ ಎಂಬ ದಾಸರ ಪದ ಹಾಡುತ್ತ ಯುವಕರು ಉತ್ಸಾಹದಿಂದ ರಥೋತ್ಸವದ ಮುಂದೆ ಕುಣಿದು ಕುಪ್ಪಳಿಸಿದರು.

ವೃಂದಾವನಕ್ಕೆಪುಷ್ಪಾಲoಕಾರ
ಟೀಕಾರಾಯರ ಮೂಲ ವೃಂದಾವನದ ಪುಷ್ಪಾಲಂಕಾರ
ಕಣ್ಮನ ಸೆಳೆಯುವಂತಿತ್ತು. ವಿವಿಧ ಪುಷ್ಪಗಳಿಂದ ಜಯತೀರ್ಥರ ಹಾಗೂ ಅಕ್ಷೋಭ್ಯತೀರ್ಥರ ಮೂಲ ವೃಂದಾವನಗಳಿಗೆ ವಿವಿಧ ಪ್ರಕಾರದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.ಭಕ್ತರು ದರ್ಶನ ಪಡೆದು ಪುನೀತರಾದರು
.

|ಇಂದ್ರನ ಸನ್ನಿಧಾನದಲ್ಲಿ ರಾಮನ ಪೂಜೆ|

ದೇವೇಂದ್ರನ ಸನ್ನಿಧಾನದಲ್ಲಿ ಶ್ರೀ ದಿಗ್ವಿಜಯ ಮೂಲರಾಮದೇವರ ಫೂಜೆ ನೋಡುವ ಸೌಭಾಗ್ಯಭಕ್ತರಿಗೆ ಲಭಿಸಿತ್ತು. ಮಹಾ ತಪಸ್ವಿಗಳಾದ ನಡೆದಾಡುವ ಗ್ರಂಥಾಲಯ ಎಂದೇ ಖ್ಯಾತಿ ಪಡೆದಿರುವ ಶ್ರೀ ಸತ್ಯಾತ್ಮತೀರ್ಥರು ರಾಮದೇವರ ಪೂಜೆ ನೆರವೇರಿಸಿದರು.
ಸ್ವರ್ಗವೇ ಧರೆಗಿಳಿದು ಬಂದ ಅನುಭವವಾಗಿತ್ತು. ದೇವಲೋಕದಲ್ಲಿ ರಾಮದೇವರ ಪೂಜೆ ನಡೆಯುತ್ತಿದೆ ಎಂದು ಭಾಸವಾಗಿತ್ತು. ಇಂದ್ರನು ನೆಲೆಸಿದ ತಾಣದಲ್ಲಿ ರಾಮದೇವರ ಪೂಜೆ ನೋಡುವುದೇ ಒಂದು ಭಾಗ್ಯ.
ಯಾವ ಜನ್ಮದ ಪುಣ್ಯದ ಫಲವೋ ಭಕ್ತರಿಗೆ ಇಂಥ ಅವಕಾಶ ಸಿಕ್ಕಿತ್ತು.
ಇಂದ್ರನ ವೈಭವ ನೋಡಲು ವರುಣನೆ ಧರೆಗಿಳಿದು ಬಂದoತೆ ತುಂತುರು ಮಳೆ ಹನಿ ಸ್ವರ್ಗದಿಂದ ಗಂಗೆ ಧರೆಗಿಳಿದು ಸಿಂಚನ ಗೈದಳು ಎಂಬAತೆ ಭಾಸಗವಂತಿತ್ತ

ಕಾಗಿಣೆಯಲ್ಲಿಮಿoದೆದ್ದ ಭಕ್ತರು|
ದೂರದ ಊರುಗಳಿಂದ ಆಗಮಿಸಿದ್ದ ಅಪಾರ ಭಕ್ತರು ಪವಿತ್ರ ಕಾಗಿಣಾನದಿಯಲ್ಲಿ ಸ್ನಾನಮಾಡಿ ಜಯತೀರ್ಥರ ವೃಂದಾವನಕ್ಕೆ ಭಕ್ತಿ ಪೂರ್ವಕ ಪ್ರದಕ್ಷಿಣೆ ಸೇವೆಗೈದರು.
ಬುಧವಾರ ರಾತ್ರಿ ಮಳಖೇಡಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದ ಭಕ್ತರು ಗುರುವಾರ ನಸುಕಿನ ಜಾವದಿಂದಲೇ ಕಾಗಿಣಾ ನದಿಯಲಿ ಸ್ಮಾನಮಾಡಿದರು.
ಸರ್ವತೀರ್ಥಗಳಲ್ಲಿ ಸ್ನಾನ ಮಾಡಿದ ಪುಣ್ಯ ಕಾಗಿಣಾ ನದಿಯಲ್ಲಿ ಮಾಡಿದರೆ ಲಭಿಸುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.

LEAVE A REPLY

Please enter your comment!
Please enter your name here