ಸೋಲಿನ ಹತಾಶೆಯಿಂದ ಪ್ರಿಯಾಂಕ ಅಟ್ರಾಸಿಟಿ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ:ಉಮೇಶ್ ಜಾಧವ್

0
612

ಕಲಬುರಗಿ, ಮೇ. 05: ಕಾಂಗ್ರೆಸ್ ಪಕ್ಷವು ಸೋಲಿನ ಹತಾಶೆಯಲ್ಲಿದ್ದು, ಪ್ರಿಯಾಂಕ ಖರ್ಗೆ ಅವರು ಯಾವುದೇ ದಾಖಲೆಗಳು ಇಲ್ಲದಿದ್ದರೂ ಅಟ್ರಾಸಿಟಿಗೆ ನಾನೇ ಕಾರಣ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಾಗಿ ಲೋಕಸಭಾ ಸದಸ್ಯರಾದ ಡಾ. ಜಾಧವ್ ಕೆಂಡಾಮAಡಲರಾಗಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಗ್ಯಾರಂಟಿಯಾಗಿದ್ದು, ಈಗ ಖರ್ಗೆ ಸುಳ್ಳು ಹೇಳಿಕೆಗಳನ್ನು ನೀಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಒಬ್ಬ ಸಚಿವನಾಗಿ ದಾಖಲೆ ಪತ್ರಗಳಲ್ಲದೆ ಆರೋಪ ಹೊರಿಸುವುದು ಅವರ ಬಾಲಿಶತನವನ್ನು ತೋರಿಸುತ್ತದೆ. ನಾನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಟ್ರಾಸಿಟಿ ಮಾಡಿರುವ ಬಗ್ಗೆ ಆರೋಪ ಸಾಬೀತು ಆದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಖರ್ಗೆ ಅವರಿಗೆ ಸವಾಲೆಸದರು.
ಪ್ರಜ್ಞಾವಂತ ಮತದಾರರ ನಡುವೆ ಸುಳ್ಳು ಪ್ರಚಾರ ಮಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಜನರಿಗೆ ಅನ್ಯಾಯವಾದಾಗ ಒಬ್ಬ ಲೋಕಸಭಾ ಸದಸ್ಯನಾಗಿ ಮತ್ತು ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿ ಪಕ್ಷ ಇರುವುದರಿಂದ ಜನರ ಸಮಸ್ಯೆಗೆ ಸ್ಪಂದಿಸ ಬೇಕಾಗುವುದು ನನ್ನ ಧರ್ಮ. ಕಲ್ಬುರ್ಗಿಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸುವುದು ಖಚಿತವಾದುದರಿಂದ ಸುಳ್ಳುಗಳ ಸರಮಾಲೆಯನ್ನು ಹೇಳಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಅವರ ಎಲ್ಲ ಸುಳ್ಳುಗಳು ಜನರಿಗೆ ಈಗ ಮನವರಿಕೆಯಾಗಿದ್ದು ಈ ಬಾರಿ ಬಿಜೆಪಿ ಅಭ್ಯರ್ಥಿ ಎರಡು ಲಕ್ಷ ಮತಗಳಿಗೂ ಹೆಚ್ಚು ಅಂತರದಿAದ ಗೆಲ್ಲುವುದಾಗಿ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಇದರಿಂದ ಕಂಗಾಲದ ಕಾಂಗ್ರೆಸ್ ವೈಯಕ್ತಿಕ ಆರೋಪ ಮಾಡುತ್ತಿದೆ ಎಂದು ಜಾಧವ್ ಆರೋಪಿದರು.
ಖರ್ಗೆಯವರು ಪ್ರತಿ ದಿನ ಪತ್ರಿಕಾಗೋಷ್ಠಿ ನಡೆಸಿ ಜಾಧವ್ ಸಾಧನೆ ಶೂನ್ಯ ಎಂದು ಮತ್ತೆ ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಕರೋನಾ ಅವಧಿಯಲ್ಲಿ ಸಮಾಜಸೇವಕ ಗುರುಶಾಂತ ಪಟ್ಟೇದಾರ, ನ್ಯಾಯವಾದಿ ವಿಜಯ್ ಕುಮಾರ್ ಮುಂತಾದ ಗಣ್ಯರು ನಮ್ಮನ್ನಗಲಿದಾಗ ಮಲ್ಲಿಕಾರ್ಜುನ ಖರ್ಗೆಯವರು ಎಲ್ಲಿದ್ದರು? ಎಂದು ಪ್ರಶ್ನಿಸಿದರು. ಅಭಿವೃದ್ಧಿ ಚಿಂತಕರಾಗಿದ್ದರೆ ದಿಶಾ ಸಭೆ ಯಾಕೆ ನಡೆಸಲಿಲ್ಲ? ನಾನೇ ಖುದ್ದು 20 ಸಲ ಪತ್ರ ಬರೆದ ನಂತರ ಹೂ ಸ್ಪಂದಿಸಲಿಲ್ಲ ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ ಬನ್ನಿ ಎಂದರೆ ಓಡಿ ಹೋದರು. ಕಲ್ಬುರ್ಗಿಯಮೆಗಾ ಜವಳಿ ಪಾರ್ಕ್ ಮೂಲಕ ಮೂರು ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗ ಲಭಿಸಲಿದ್ದು 600 ಕೋಟಿಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಈಗಾಗಲೇ ಹತ್ತು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಯೋಜನೆ ತಲೆ ಎತ್ತಲಿದೆ. ಭಾರತ್ ಮಾಲಾ ರಸ್ತೆ1475 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ವಿಮಾನ ನಿಲ್ದಾಣದಲ್ಲಿ ರಾತ್ರಿ ಕೂಡ ವಿಮಾನಗಳು ಬಂದು ಹಿಡಿಯುತ್ತೇವೆ ವಿಮಾನ ತರಬೇತಿ ಕೇಂದ್ರ ಪ್ರಾರಂಭಗೊAಡಿದೆ ಇಎ??? ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಕೂರ್ಸುಗಳು ಆರಂಭಗೊAಡಿದೆ ದ್ರವೀಕೃತ ಆಮ್ಲಜನಕ ಘಟಕ ಕಾರ್ಯಾಚರಿಸುತ್ತಿದೆ. ಜಿಮ್ಸ್ ನಲ್ಲಿ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲಾಗಿದೆ ಜಲಜೀವನ್ ಮಿಷನ್ ಅಡಿಯಲ್ಲಿ ಬೇಡ ಸೂರು ಸನ್ನತಿಯ ತಲಾ 100 ಗ್ರಾಮಗಳಿಗೆ 1500 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿ ಮಾಡಲಾಗಿದೆ. ಅಮೃತ ಭಾರತ್ ರೈಲು ನಿರ್ಧಾರ ಅಭಿವೃದ್ಧಿ ಯೋಜನೆಯಲ್ಲಿ ವಾಡಿ ಕಲಬುರ್ಗಿ ಶಹಬಾದ್ ಸ್ಟೇಷನ್ ಗಾಣಗಾಪುರ್ ರೈಲು ನಿಲ್ದಾಣಗಳು ಮರ 150 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಚಿತಾಪುರ ಪಾದಾ ಚಾರಿ ಮೇಲು ಸೇತುವೆ ನೀಲೂರುನಲ್ಲಿ ಕೆಳ ಸೇತುವೆ, ಒಂದೇ ಭಾರತರ ರೈಲು ವಾರಕ್ಕೆ ಮೂರು ದಿನ ಸಂಚರಿಸುವ ಇನ್ನೊಂದು ರೈಲು ಹೀಗೆ ನೂರಾರು ಕೆಲಸಗಳಾದರು ಕಾಂಗ್ರೆಸ್ಸಿನವರಿಗೆ ಯಾವುದು ಕಾಣುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಗುಲ್ಬರ್ಗ ಬಿಟ್ಟು ಬಹಳ ಸಮಯವಾಗಿರುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಇಲ್ಲ ಎಂದು ಟೀಕಿಸಿದರು.
ಕೋಟನೂರು (ಡಿ) ಘಟನೆ ಸಂದರ್ಭದಲ್ಲಿ ನಾನು ಅಸ್ವಸ್ಥನಾದ ಬಗ್ಗೆ ಕಾಂಗ್ರೆಸ್ ನಾಟಕ ಎಂದು ಲೇವಡಿ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ನಾನು ಸ್ವತಃ ವೈದ್ಯನಾಗಿರುವುದರಿಂದ ಮತ್ತು ಎರಡುವರೆ ತಾಸು 46 ಡಿಗ್ರಿ ಉಷ್ಣಾಂಶದಲ್ಲಿ ಬೆಂಕಿಯAತೆ ಉರಿಯುತ್ತಿರುವ ತಾಮ್ರ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದಾಗ ಆರೋಗ್ಯದಲ್ಲಿ ಏರುಪೇರು ಆಗಿರೋದು ವೈದ್ಯಕೀಯ ದಾಖಲೆ ಹೇಳುತ್ತದೆ. ಇದನ್ನು ಲೇವಡಿ ಮಾಡಿರುವುದು ಅಮಾನವೀಯ ನಡವಳಿಕೆ ಎಂದು ಹೇಳಿದರು. ರಾಷ್ಟ್ರೀಯ ನಾಯಕರು ನನ್ನ ಚುನಾವಣೆ ಪ್ರಚಾರಕ್ಕೆ ಬರಲಿಲ್ಲ ಎಂಬುದು ಅಲ್ಲ ಗೆಳದ ಅವರು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಅಧ್ಯಕ್ಷರಾದ ಜೆ.ಪಿ ನಡ್ಡಾ ಶಿವರಾಜ್ ಸಿಂಗ್ ಚೌಹಾನ್, ಬಿ ಎಲ್ ಸಂತೋಷ್ ಬಿ ವೈ ವಿಜಯೇಂದ್ರ , ಅಣ್ಣಾಮಲೈ ಆಗಮಿಸಿ ಮತ ಯಾಚಿಸಿದ್ದಾರೆ. ಕಾಂಗ್ರೆಸ್ಸಿನ ಕೆಲ ನಾಯಕರಿಗೆ ಬಿಎಲ್ ಸಂತೋಷ್ ಆಗಮಿಸಿದರೆ ಅಲರ್ಜಿ ಆಗುತ್ತಿದೆ ಬಿ ಎಲ್ ಸಂತೋಷ ಅವರು ದೇಶಭಕ್ತ ಮತ್ತು ತನ್ನ ಬಟ್ಟೆಯನ್ನು ತಾನೇ ತೊಳೆದು ಉಡುತ್ತಿರುವ ಒಬ್ಬ ಸರಳ ವ್ಯಕ್ತಿತ್ವದ ಗಟ್ಟಿಗ ಎಂದು ಹೇಳಿದರು. ಜಾಧವ್ ಬೇರೆ ಲಂಬಾಣಿಕ ನಾಯಕರನ್ನು ಬೆಳೆಸುವುದಿಲ್ಲ ಎಂಬುದನ್ನು ಸಾರಾಸಗಟವಾಗಿ ಅಲ್ಲಗೆಳೆದು ವಿಠ್ಠಲ್ ಜಾಧ ವ್ ಆರೋಪ ಸುಳ್ಳು. ಅವರನ್ನು ಕಾರ್ಪೊರೇಟ್ ಹಾಗೂ ವಿಪಕ್ಷ ನಾಯಕ ಮಾಡಿದ್ದೆ ಬಿಜೆಪಿ ಈ ಸತ್ಯವನ್ನು ಅವರು ಮರೆತಿದ್ದಾರೆ ಎಂದು ಟೀಕಿಸಿದರು.
ಕೋಟನೂರು ಡಿ ಘಟನೆಯನ್ನು ಬಿಜೆಪಿ ಟೂಲ್ ಕಿಟ್ ಆಗಿ ಬಳಸಿಕೊಳ್ಳುತಿದೆ ಎಂಬ ಕಾಂಗ್ರೆಸ್ಸಿನ ಆರೋಪಕ್ಕೆ ಟೀಕಿಸಿದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಇದಕ್ಕೆಲ್ಲ ಸಂತ್ರಸ್ತ ಕುಟುಂಬದ ಹೆಣ್ಣುಮಗಳು ಪ್ರಿಯಾಂಕ ಪಾಟೀಲ್ ಈಗಾಗಲೇ ಕಾಂಗ್ರೆಸ್ ನವರಿಗೆ ಹೇಳೇ ಯಾಗಿ ಬಿಡಿಸಿ ಹೇಳಿ ಉತ್ತರಿಸಿದ್ದಾರೆ ಆ ಕುಟುಂಬಕ್ಕೆ ನ್ಯಾಯ ಕೊಡುವುದನ್ನು ಬಿಟ್ಟು ಈ ರೀತಿಯಾಗಿ ಆರೋಪ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಮತ್ತು ಕಾಂಗ್ರೆಸ್ ಇದನ್ನು ಟೂಲ್ ಕಿಟ್ಟಾಗಿ ಬಳಸುತ್ತಿದೆ ಎಂದು ಮರು ಆರೋಪಿಸಿದರು. ವೀರಶೈವ ಲಿಂಗಾಯತರ ಮುಖ್ಯಮಂತ್ರಿ ಯನ್ನಾಗಿಸಲು ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ಬೇಸರತ್ ರಾಜೀನಾಮೆ ಸಲ್ಲಿಸಿ, ಹೊರಬಂದವರು. ವೀರಶೈವ ಲಿಂಗಾಯತ ಸಮಾಜಕ್ಕೆ ಯಾವತ್ತು ಬೆಂಬಲವಾಗಿ ನಿಂತವರು ಎಂದು ಹೇಳಿದರು ಆದರೆ ಕಾಂಗ್ರೆಸ್ ಪಕ್ಷವು ಲಿಂಗಾಯತರನ್ನು ಟಿಶ್ಯೂ ಪೇಪರ್ ಯಾಗಿ ಬಳಸಿದೆಯೇ ವಿನಹ ಲಿಂಗಾಯಿತ ಸಮಾಜಕ್ಕಾದ ನೋವಿನ ಬಗ್ಗೆ ಯಾವತ್ತೂ ಸ್ಪಂದಿಸಲಿಲ್ಲ. ಕೋಟನ್ನುರುಡಿ ಘಟನೆ ಗೆ ನ್ಯಾಯ ಒದಗಿಸಲು ಸಿಐಡಿ ಬದಲಾಗಿ ಸಿಬಿಐ ತನಿಖೆ ಆಗಬೇಕು ಎಂದು ಸಂತ್ರಸ್ತಮ್ಮೆ ಕುಟುಂಬದ ಮಹಿಳೆ ಒತ್ತಾಯಿಸಿರೋದಕ್ಕೆ ಕಾಂಗ್ರೆಸ್ ಮೌನವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಲಿ ಮತ್ತು ಲಿಂಗಾಯತ ಸಮಾಜದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರನ್ನು ಹಲವು ಬಾರಿ ಭೇಟಿಯಾಗಿ ಸಹಾಯಕ್ಕಾಗಿ ಭಿಕ್ಷೆ ಬೇಡಿದರು ಗೌರವ ಕೊಡಲಿಲ್ಲ ಎಂದು ಆರೋಪಿಸಿದರು. ಬಿಜೆಪಿ ಸರಕಾರವು ಕಲಬುರ್ಗಿಗೆ ಸಚಿವ ಸ್ಥಾನ ಕೊಡಲಿಲ್ಲ ಎಂಬುದಕ್ಕೆ ಉತ್ತರಿಸಿ 10 ಮಂದಿ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಂದಿರುವ ಕಾರಣ ಅವರಿಗೆ ಅವಕಾಶ ಮಾಡಿಕೊಡಲು ಸಚಿವ ಸ್ಥಾನ ನೀಡಲಿಲ್ಲ ಆದರೆ ತೇಲುಕು ಚಂದು ಪಾಟೀಲ್ ಶಶಿಕಲಾ ಟೆಂಗಲಿ , ಹರ್ಷವರ್ಧನ ಗುಗಳೆ, ಲಿಂಗಾರೆಡ್ಡಿ ಭಾಸರೆಡ್ಡಿ ಮತ್ತು ನನಗೆ ನಿಗಮ ಮಂಡಳಿಗಳ ಸ್ಥಾನ ನೀಡಿ ನ್ಯಾಯ ಒದಗಿಸಿದೆ ಎಂದು ಹೇಳಿದರು.
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಅವರು ಮಾತನಾಡಿ ಕಾಂಗ್ರೆಸ್ ವೀರಶೈವ ಸಮಾಜದವರನ್ನು ತೀರಾ ಕಡೆಗಣಿಸುತ್ತಿದ್ದು ಮಂತ್ರಿ ಸ್ಥಾನ ಪಡೆಯಲು ಅರ್ಹತೆ ಇರುವ ಎಂ ವೈ ಪಾಟೀಲ್ ಹಾಗೂ ಬಿ ಆರ್ ಪಾಟೀಲ್ ಅವರನ್ನು ಪರಿಗಣಿಸಲಿಲ್ಲ. ಎಂ ವೈ ಪಾಟೀಲರಿಗೆ ಆರೋಗ್ಯದ ತೊಂದರೆ ಇದ್ದರು ಅವರಿಗೆ ಕೆಕೆ ಆರ್‌ಟಿಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು ಆದರೆ ಅವರು ಅದನ್ನು ತಿರಸ್ಕರಿಸಿದರು. ಮಗ ಅರುಣ್ ಕುಮಾರ್ ಪಾಟೀಲ್ ಗೆ ಆ ಸ್ಥಾನ ಕಾಂಗ್ರೆಸ್ ಒಪ್ಪಲಿಲ್ಲ. ಕೇವಲ ನಾಟಕವನ್ನು ಆಡುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here