ಸ್ವಾತಂತ್ರ‍್ಯ ಹೋರಾಟಗಾರ ಸಾಲಿನಲ್ಲಿ ಗಾಂಧಿ ಕೊಂದ ಗೋಡ್ಸೆ ಚಿತ್ರ

0
563

ಕಲಬುರಗಿ, ಸೆ. 28: ಕ್ರಾಂತಿವೀರ ಭಗತಸಿಂಗ್ ಅವರ ಜನ್ಮದಿನ ಕಾರ್ಯಕ್ರಮವೊಂದರಲ್ಲಿ ಸ್ವಾತಂತ್ರ ಹೋರಾಟಗಾರರ ಸಾಲಿನಲ್ಲಿಟ್ಟ ಭಾವಚಿತ್ರಗಳಲ್ಲಿ ಮಹಾತ್ಮಾ ಗಾಂಧೀಜಿ ಅವರ ಹತ್ಯೆಗೈದ ನಾಥುರಾಮ ಗೋಡ್ಸೆ ಅವರ ಭಾವಚಿತ್ರವಿಟ್ಟು ಪೂಜೆ ಮಾಡಿದ ಕಾಯಕ್ರಮ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ನಡೆದಿದೆ.

ಭಗತಸಿಂಗ್ ಜನ್ಮದಿನದ ಆಚರಣೆ ಕಾರ್ಯಕ್ರಮದ ನಿಮಿತ್ಯ ಮಂದೇವಾಲ ಗ್ರಾಮದ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ಸ್ವಾತಂತ್ರ ಹೋರಾಟಗಾರರ ಸಾಲಿನಲ್ಲಿ ಗೋಡ್ಸೆ ಚಿತ್ರಕ್ಕೂ ಪೂಜೆ ಮಾಡಿ ಮೆರವಣಿಗೆ ಮಾಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯಲ್ಲಿ ಸ್ವಾತಂತ್ರ ಹೋರಾಟಗಾರರಾದ ಭಗತ್‌ಸಿಂಗ್, ಸುಭಾಶ್ಚಂದ್ರ ಬೋಸ್, ರಾಣಿ ಚೆನ್ನಮ್ಮ, ಸರ್ಧಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರ ಮೆರವಣಿಗೆ ಮಾಡಲಾಗಿತ್ತು.
ಒಂದೊAದು ಎತ್ತಿನ ಬಂಡಿಯಲ್ಲಿ ಒಬ್ಬೊಬ್ಬ ಸ್ವಾತಂತ್ರ ಹೋರಾಟಗಾರರ ಭಾವಚಿತ್ರವಿಟ್ಟು ಗ್ರಾಮಸ್ಥರು ಗ್ರಾಮದ ತುಂಬೆಲ್ಲಾ ಮಾಡಲಾದ ಮೆರವಣಿಗೆಯಲ್ಲಿ ನಾಥುರಾಮ ಗೋಡ್ಸೆ ಭಾವಚಿತ್ರವಿಟ್ಟು ಮೆರವಣಿಗೆ ಮಾಡಿದರು.
ಈ ಕುರಿತು ದೂರು ನೀಡಲಾದ ಹಿನ್ನೆಲೆಯಲ್ಲಿ ನೆಲೋಗಿ ಠಾಣಾ ಪೋಲಿಸರು ಗ್ರಾಮಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here