ಚಿಂಚೋಳಿ, ಸೆ. 22: ಮಹಿಳೆಯೋರ್ಳವಳನ್ನು ಸೀರೆಹಿಡಿದು ವಸ್ತಾçಪಹರಣ ಮಾಡಿ ನಗ್ನಗೊಳಿಸಿ ಬಲತ್ಕಾರಕ್ಕೆ ಪ್ರಯತ್ನಿಸಿದ ತಾಲೂಕಿನ ಯಂಪಳ್ಳಿ ಗ್ರಾಮದ ನಿವಾಸಿಯಾದ ಗುರಪಾದಪ್ಪಾ ತಂದೆ ಗುರುನಾಥ ತಂದೆ ಶಿವಶರಣಪ್ಪಾ ಬಿರದಾರ ಎಂಬ ಆರೋಪಿತನಿಗೆ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶರಾದ ರವಿಕುಮಾರರವರು 3 ವರ್ಷ ಸಾದಾ ಶಿಕ್ಷೆ ಹಾಗೂ 12500 ದಂಡ ವಿಧಿಸಿ, ಆದೇಶಿಸಿದ್ದಾರೆ.
ದಿನಾಂಕ: 10.9.2022ರಂದು ರಾತ್ರಿ 11-30 ಗಂಟೆಯ ಸುಮಾರಿಗೆ, ಚಿಂಚೋಳಿಯ ಯಂಪಳ್ಳಿ ಗ್ರಾಮದಲ್ಲಿ ಆರೋಪಿತನು ಫಿರ್ಯಾದಿದಾರಳ ಮನೆಗೆ ಬಾಗಿಲು ಬಡೆದು ಪಿರ್ಯಾದರಳು ಏಕೆ ಬಂದಿದಿಯಾ, ಅಂತಾ ಕೇಳಿದಕ್ಕೆ, ಆರೋಪಿತನು ಫಿರ್ಯಾದಿದಾರಳಿಗೆ ಒಳಗಡೆ ತಳಿ, ಸೀರೆಹಿಡಿದು ವಸ್ತಾçಪಹರಣ ಮಾಡಿ, ನಗ್ನಗೊಳಿಸಲು ಪ್ರಯತ್ನಿಸಿ, ಬಲಪ್ರಯೋಗ ಮಾಡಿದ್ದು ಅಲ್ಲದೆ ಅವಾಚ್ಯವಾಗಿ ಬೈದು ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದರಿಂದ ಆರೋಪಿತನ ವಿರುದ್ದ ಆರೋಪ ಸಾಬಿತಾಗಿರುತ್ತದೆ,
ಈ ಬಗ್ಗೆ ಚಿಂಜೋಳಿ ಪೋಲಿಸ ಠಾಣೆಯ ಮಂಜುನಾಥ ರಡ್ಡಿ, ಪಿ.ಎಸ್.ಐ ರವರು ಪ್ರಕರಣದ ಸಂಪೂರ್ಣ ತನಿಖೆಯನ್ನು ಮಾಡಿ ಆರೋಪಿತನ ಮೇಲೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಆರೋಪಿತನು ಮೂರು ವರ್ಷ ಸಾದಾ ಕಾರಾಗೃಹವಾರ ಮತ್ತು ಒಟ್ಟು ರೂ. 12500 ರೂ. ದಂಡ ಹಾಗೂ ದಂಡ ತುಂಬಲು ತಪ್ಪಿದದಲ್ಲಿ ಮತ್ತೆ 5 ತಿಂಗಳ ಸಾದಾ ಕಾರಾಗೃಹವಾಸ ಹಾಗೂ ದಂಡದ ರೂಪದಲ್ಲಿದ್ದ ಹಣದಲ್ಲಿ 10 ಸಾವಿರ ರೂ.ಗಳನ್ನು ಫಿರ್ಯಾದಿದಾರಳಿಗೆ ಹಾಗೂ 2500 ರೂ.ಗಳನ್ನು 2500 ರೂ.ಗಳನ್ನು ರಾಜ್ಯ ಸರಕಾರಕ್ಕೆ ತುಂಬಲು ದಿನಾಂಕ 14 ಸೆಪ್ಟಂಬರ್ 2023ರಂದು ಆದೇಶ ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಶಾಂತಕುಮಾರ ಜಿ. ಪಾಟೀಲ ರವರು ವಾದ ಮಂಡಿಸಿದ್ದರು.