ಭವಾನಿಕುಮಾರ ವಳಕೇರಿ ನಿಧನ

0
228

ಕಲಬುರಗಿ, ಮೇ. 27:ಜಾತ್ಯಾತೀತ ಜನತಾ ದಳದ ಧುರೀಣ ಭವಾನಿಕುಮಾರ ವಳಕೇರಿ ಅವರು ಇಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ.
ಅವರಿಗೆ 61 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೆ ಅವರ ಪತ್ನಿ ಮಹಾನಗರಪಾಲಿಕೆಯ ಮಾಜಿ ಮಹಾಪೌರರರಾದ ಗಂಗೂಬಾಯಿ ವಳಕೇರಿ ಅವರ ಪತಿಯಾಗಿದ್ದ ಇವರು ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಹಾಗೂ ಅಪರ ಬಂಧು ಬಳಗವನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ದಿವಂಗತರ ಪಾರ್ಥಿವ ಶರೀರದ ಅಂತಿಮ ದರ್ಶನ ನಗರದ ಆಶೋಕ ನಗರದ ಸ್ವಂತ ಮನೆಯಲ್ಲಿ ಇಡಲಾಗಿದ್ದು, ಅವರ ಅಂತ್ಯಕ್ರಿಯೆಯು ದಿನಾಂಕ 27.05.2023ರಂದು ಮಧ್ಯಾಹ್ನ 4.00 ಗಂಟೆಗೆ ರಾಜಾಪೂರ ರಸ್ತೆಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಿಂದುಗಡೆಯಿರುವ ಜಗತ್- ಸುಂದರ ನಗರ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಭವಾನಿಕುಮಾರ ವಳೇರಿ ಅವರ ನಿಧನಕ್ಕೆ ಮಹೇಶ ಭಾವಿಕಟ್ಟಿ, ರಾಜು ದೇಶಮುಖ, ಶಾಮ ನಾಟೀಕರ್, ಕೈಲಾಸ ಸಲಗರ, ಶಿವಕುಮಾರ ಮಠ, ವೀರೇಶ ಮುಗುಳಿ, ರವಿ ಚೌಡಪಗೋಳ, ಡಾ. ಗುಗ್ಗವಾಡ, ಅನೀಲಕುಮಾರ ಪಾಟೀಲ ಕುಕನೂರ, ಮಹಾಂತಯ್ಯ ಸ್ವಾಮಿ ಸೇರಿದಂತೆ ಅಪಾರ ಗೆಳಯರ ಬಳಗ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

LEAVE A REPLY

Please enter your comment!
Please enter your name here