“ಶ್ರೀ ಪ್ರಸನ್ನ ವೆಂಕಟದಾಸರು” ಚಿತ್ರದ ಧ್ವನಿ ಸುರುಳಿ ಬಿಡುಗಡೆ

0
683

ಬೆಂಗಳೂರು, ಸೆ. 27: ಇಲ್ಲಿನ ಕಲಾವಿದರ ಭವನದ ಡಾ.ಅಂಬರೀಶ್ ಆಡಿಟೋರಿಯಂನಲ್ಲಿ ಶ್ರೀ ಪ್ರಸನ್ನ ವೆಂಕಟದಾಸರ ಚಲನ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.
ಧ್ವನಿ ಸುರುಳಿ ಬಿಡುಗಡೆಗೊಳಿಸಿದ ನಂತರ ಚಲನ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಮಧುಸೂದನ್ ಹವಾಲ್ದಾರ್ ಮಾತನಾಡಿ, ದಾಸರ ಸಾಮಾಜಿಕಪರ ಚಿಂತನೆಗಳನ್ನು ಎಲ್ಲಾ ಸಮುದಾಯಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
ದಾಸಸಾಹಿತ್ಯದ ರಸವತ್ತಾದ ಸಾರವನ್ನು ಚಿತ್ರದ ಮುಲಕ ಪ್ರದರ್ಶಿಸುವ ಉದ್ದೇಶಿಸಲಾಗಿದೆ. ದಾಸರ ಜೀವನ ಚರಿತ್ರೆ ಕುರಿತು ಸಮಗ್ರ ಮಾಹಿತಿಯನ್ನೊಳಗೊಂಡ ಈ ಚಿತ್ರವನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಕಲಬುರಗಿ ದಾಸ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರವಿ ಲಾತೂರಕರ್, ಡಾ.ಪ್ರಹ್ಲಾದ ಭುರ್ಲಿ, ನಟರಾದ ಪ್ರಭಂಜನ ದೇಶಪಾಂಡೆ , ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಖ್ಯಾತ ಗಾಯಕ ಶೇಷಗಿರಿ ದಾಸ್, ಸಂಗೀತ ನಿರ್ದೇಶಕ ವಿಜಯ ಕೃಷ್ಣ, ತ್ರಿವಿಕ್ರಮ ಜೋಷಿ, ವಾಸುದೇವ ಅಗ್ನಿಹೋತ್ರಿ ಸೇಡಂ, ಚಿತ್ರತಂಡದ ಕಲಾವಿದರು,ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here