ಸಿದ್ದರಾಮಯ್ಯ ಕಾರಿನ ಮೇಲೆ ಹಣ ಎಸೆದ ಮಹಿಳೆ ಬಾಗಲಕೋಟೆಯಲ್ಲಿ ಹೈಡ್ರಾಮಾ, ಮಹಿಳೆ ಆಕ್ರೋಶ

0
1131

(ನಮ್ಮ ವರದಿಗಾರರಿಂದ)
ಬಾಗಲಕೋಟ, ಜುಲೈ, 15: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರ ಧನ ಹಣವನ್ನೇ ಎಸೆದ ಘಟನೆ ಬಾಗಲಕೋಟೆಯಲ್ಲಿ ನಡೆಇದೆ.
ಸಿದ್ದು ಎದುರಲ್ಲೇ ನಡೆದ ಹೈಡ್ರಾಮಾ ಕೆರೂರ ಗ್ರಾಮದಲ್ಲಿ ನಡೆದಿದೆ.ಮಹಿಳೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕುಲಗೇರಿ ಡಾಬಾದಲ್ಲಿ ನಡೆದ ಗುಂಪು ಘರ್ಷಣೆ ಘಟನೆಯಲ್ಲಿ ಗಾಯಗೊಂಡಿವರಿಗೆ ಸಾಂತ್ವನ ಹಾಗೂ ವೈಯಕ್ತಿಕ ಸಹಾಯ ಮಾಡಲು ಸಿದ್ದರಾಮಯ್ಯ ಅವರು ಹೋದ ವೇಳೆ ಈ ಘಟನೆ ನಡೆದಿದೆ.
ಗಾಯಗೊಂಡಿವರಿಗೆ ಸಾಂತ್ವನ ಹಾಗೂ ವೈಯಕ್ತಿಕ ಸಹಾಯ ಮಾಡಲು ಬಂದ ವೇಳೆ ಈ ಘಟನೆ ನಡೆದಿದೆ.

ಸಿದ್ದರಾಮಯ್ಯ ಮಾಜಿ ಸಿಎಂ, ಬಾದಾಮಿ ಮತಕ್ಷೇತ್ರದ ಶಾಸಕರಾಗಿದ್ದು ಅವರು ಬಾಗಲಕೋಟೆಗೆ ಆಗಮಿಸಿದ ವೇಳೆ ಗಾಯಾಳುಗಳ ಸಂಬAಧಿಗಳ ಆಕ್ರೋಶ ವ್ಯಕ್ತಪಡಿಸಿ ನಮಗೆ ನಿಮ್ಮ ಹಣ ಬೇಕಿಲ್ಲ, ನಾವು ಕಸ, ಮುಸರೆ ಬೇಕಾದರೆ ಮಾಡಿ ಹಣ ಪಡೆಯುತ್ತೇವೆ, ನಮಗೆ ನಿಮ್ಮ ಹಣ ಬೇಡಿವೆಂದು ಗಾಯಗೊಂಡಿದ್ದ ಯುವಕನ ಸೋದರಿ ಸಿದ್ಧರಾಮಯ್ಯನವರಿಗೆ ತಿರುಗೇಟು ನೀಡಿದರು.

ಗಾಯಾಳುಗಳಿಗೆ ನೀಡಿದ ಹಣವನ್ನೇ ಮರಳಿ ಸಿದ್ದರಾಮಯ್ಯಗೆ ನೀಡಲು ಮುಂದಾದ ಗಾಯಾಳುಗೆ ಸಿದ್ದು ಕೊಟ್ಟ ಹಣ ಹಿಂಪಡೆಯಲು ನಿರಾಕರಿಸಿದಾಗ ಸಿದ್ದು ವಾಹನದ ಹಿಂದಿನ ಬೆಂಗಾವಲು ವಾಹನಕ್ಕೆ ಬೆನ್ನತ್ತಿ 2 ಲಕ್ಷ ರೂ. ಹಣ ಕಾರಿನ ಮೇಲೆ ಹಣದ ಕಂತೆ ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದಳು ಮುಸ್ಲಿಂ ಮಹಿಳೆ.

ಕೆರೂರ ನಗರದ ಆಶೀರ್ವಾದ ಆಸ್ಪತ್ರೆಯಲ್ಲಿ ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನ ಭೇಟಿ ಮಾಡಲು ಸಿದ್ದರಾಮಯ್ಯ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್ ವಾಯ್ ಮೆಟಿ, ಮಾಜಿ ಶಾಸಕ ಜೆ. ಟಿ. ಪಾಟೀಲ್, ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಬಾಗಿ, ಡಿಸಿ ಸುನೀಲಕುಮಾರ್, ಎಸ್.ಪಿ.ಜಯಪ್ರಕಾಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here