ಕಲಬುರಗಿ,ಜೂ.23: ಇನ್ನು ಮುಂದೆ ಜಿಲ್ಲಾಧಿಕಾರಿಗಳ ಕಛೇರಿಯ ಮೆಟ್ಟಿಲುಗಳ ಮುಂದೆ ಮುಷ್ಕರ, ಪ್ರತಿಭಟನೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಬುಧುವಾರ ಆದೇಶ ಹೊರಡಿಸಿದ್ದಾರೆ.
ಧರಣಿ, ಸತ್ಯಾಗ್ರಹ, ಮುಷ್ಕರ ನಿಮಿತ್ಯ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತಿರುವ ಕಾರಣ ಕಚೇರಿಗೆ ಬರುವವರಿಗೆ ಮತ್ತು ಕಚೇರಿ ಕೆಲಸಕ್ಕೆ ಅಡಚಣೆಯಾಗುತ್ತಿದ್ದು, ಸುಗಮ ಕಾರ್ಯನಿರ್ವಹಣೆ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡಲು ಆವರಣ ಪ್ರವೇಶಕ್ಕೆ ತಡೆ ನೀಡಿ ಮೆಟ್ಟಿಲುಗಳ ಮುಂದೆ ಪ್ರತಿಭಟನೆ, ಮುಷ್ಕರ, ಸತ್ಯಾಗ್ರಹ ಕೈಗೊಳ್ಳದಂತೆ ಡಿ.ಸಿ. ಯಶವಂತ ವಿ. ಗುರುಕರ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ, ಮುಷ್ಕರನಿರತ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅನುಕೂಲವಾಗುವಂತೆ ಡಿ.ಸಿ. ಕಚೇರಿಗೆ ಪ್ರವೇಶಿಸುವ ಎಡ ಭಾಗದ ಪ್ರವೇಶ ದ್ವಾರದಲ್ಲಿ (ನಗರಾಭಿವೃದ್ಧಿ ಕಚೇರಿ ಪಕ್ಕದಲ್ಲಿ) ಪ್ರತ್ಯೇಕವಾಗಿ ಸ್ಥಳಾವಕಾಶ ನೀಡಿದ್ದು, ಅಲ್ಲಿಯೆ ಮನವಿ ಪತ್ರ ಸಲ್ಲಿಸುವಂತೆ ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಡಿ.ಸಿ.ಕಚೇರಿ ಮೆಟ್ಟಿಲುಗಳ ಮುಂದೆ ಧರಣಿ, ಮುಷ್ಕರ ಮಾಡುವಂತಿಲ್ಲ ಡಿ.ಸಿ. ಯಶವಂತ ವಿ. ಗುರುಕರ್ ಆದೇಶ
Total Page Visits: 234 - Today Page Visits: 2